ಅವಮಾನ ಸಹಿಸಲಾರದೆ ಮಹಂತ್ ನರೇಂದ್ರ ಗಿರಿ ಆತ್ಮಹತ್ಯೆ: ಸಿಬಿಐ ಆರೋಪ ಪಟ್ಟಿ

Prasthutha|

ಲಕ್ನೋ: ಅಖಿಲ ಭಾರತೀಯ ಅಖಾಡ ಪರಿಷತ್ ನ ಅಧ್ಯಕ್ಷರಾಗಿದ್ದ ಮಹಂತ್ ನರೇಂದ್ರ ಗಿರಿ ಅವರು ತಮ್ಮ ಮಾಜಿ ಶಿಷ್ಯಂದಿರರಾದ ಆನಂದ್ ಗಿರಿ, ಪುರೋಹಿತ್ ಆಧ್ಯ ಪ್ರಸಾದ್ ತಿವಾರಿ ಮತ್ತು ಆತನ ಮಗ ಸಂದೀಪ್ ತಿವಾರಿಯಿಂದ ಗಂಭೀರ ಮಾನಸಿಕ ಆಘಾತಕ್ಕೆ ಒಳಗಾಗಿದ್ದರು.

- Advertisement -

ಈ ಹಿನ್ನೆಲೆಯಲ್ಲಿ ಅವಮಾನವನ್ನು ತಪ್ಪಿಸಲು ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸಿಬಿಐ ತನ್ನ ಆರೋಪ ಪಟ್ಟಿಯಲ್ಲಿ ತಿಳಿಸಿದೆ.

ಮಹಂತ್ ಆತ್ಮಹತ್ಯೆ ಮಾಡುತ್ತಿರುವ ವೀಡಿಯೋ ತುಣುಕನ್ನು ಸಿಬಿಐ ವಶಪಡಿಸಿಕೊಂಡಿದೆ. ಇದರಲ್ಲಿ ಮಹಿಳೆಯೊಂದಿಗೆ ಆಕ್ಷೇಪಾರ್ಹ ರೀತಿಯಲ್ಲಿರುವ ಮಹಂತ್ ಗಿರಿ ಅವರ ತಿರುಚಿದ ವೀಡಿಯೋವೊಂದನ್ನು ಆನಂದ್ ಗಿರಿ ಎಂಬಾತ ಬಿಡುಗಡೆ ಮಾಡಲು ಯೋಜನೆ ಹಾಕಿದ್ದ ಎಂದು ಆ ವೀಡಿಯೋದಲ್ಲಿ ಮಹಂತ್ ಆರೋಪಿಸಿದ್ದಾರೆ.

- Advertisement -

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹನುಮಾನ್ ಮಂದಿರದ ಅರ್ಚಕ ಆನಂದ್ ಗಿರಿ, ಆಧ್ಯ ಪ್ರಸಾದ್ ತಿವಾರಿ,ಸಂದೀಪ್ ತಿವಾರಿ ವಿರುದ್ಧ ಆತ್ಮಹತ್ಯೆಯ ಪ್ರಚೋದನೆ ಮತ್ತು ಕ್ರಿಮಿನಲ್ ಪಿತೂರಿ ಆರೋಪದಲ್ಲಿ ಸಿಬಿಐ ಚಾರ್ಚ್ ಶೀಟ್ ಸಲ್ಲಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾರತದ ಅತೀ ದೊಡ್ಡ ಧಾರ್ಮಿಕ ಸಂಘಟನೆಯ ಮುಖ್ಯಸ್ಥರಾದ ನರೇಂದ್ರ ಗಿರಿ ಅವರು ಸಪ್ಟೆಂಬರ್ 20 ರಂದು ಆತ್ಮಹತ್ಯೆ ನಡೆಸಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು.

Join Whatsapp