ಮಡಿಕೇರಿ: ಭಾರೀ ಮಳೆಗೆ ಮನೆಯ ಮೇಲೆ ಬಿದ್ದ ಮರ

Prasthutha|

ಕೊಡಗು: ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ಮನೆಯ ಮೇಲೆ ಮರ ಬಿದ್ದಿರುವ ಘಟನೆ ಸೋಮವಾರಪೇಟೆ ತಾಲ್ಲೂಕಿನ ಶನಿವಾರಸಂತೆ ಹೋಬಳಿಯ ರಾಮನಳ್ಳಿ ಗ್ರಾಮದಲ್ಲಿ ನಡೆದಿದೆ.

- Advertisement -

ವಿನಾತ್ ಕುಮಾರ್  ಎಂಬವರಿಗೆ ಸೇರಿದ ಮನೆ ಮೇಲೆ , ವೃದ್ದರೊಬ್ಬರು  ಅಡುಗೆ ಮಾಡುತ್ತಿರುವ ಸಮಯದಲ್ಲಿ ಬೀಟೆ ಮರ ಬಿದ್ದಿದೆ.  ಅದೃಷ್ಟಾವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.  ವಿಚಾರ ತಿಳಿಯುತ್ತಿದ್ದಂತೆ ಶನಿವಾರಸಂತೆ ಕಂದಾಯ ಅಧಿಕಾರಿ  ರಜಾಕ್  ನೇತೃತ್ವದ ತಂಡ ಘಟನ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದೆ.

Join Whatsapp