ಧರ್ಮನಿಂದನೆಗೈಯುತ್ತಲೇ ಥಳಿಸಿ ಕ್ರೂರತೆ ಮೆರೆದ ಪೊಲೀಸರು !
ಖಾರ್ಗೋನ್ (ಮಧ್ಯಪ್ರದೇಶ): ಉಪವಾಸ ವ್ರತಾಚರಿಸಿ ನಡೆಸಿ ಮನೆಗೆ ಹಾಲು ತರಲು ತೆರಳಿದ್ದ ವಯೋವೃದ್ಧರೊಬ್ಬರಿಗೆ ಮಧ್ಯಪ್ರದೇಶ ಪೊಲೀಸರ ಗುಂಪೊಂದು ಗಂಭೀರವಾಗಿ ಹಲ್ಲೆ ನಡೆಸಿರುವ ಘಟನೆ ಗಲಭೆ ಪೀಡಿತ ಖಾರ್ಗೋನ್ ನಿಂದ ವರದಿಯಾಗಿದೆ.
ಘಟನೆಯ ಕುರಿತ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಇಫ್ತಾರ್ ಸಮಯದಲ್ಲಿ ಮನೆಗೆ ಹಾಲು ತರಲು ಬಂದ ವಯೋವೃದ್ಧರಿಗೆ ಧರ್ಮನಿಂದನೆಗೈದು ಮನಸೋಇಚ್ಛೆ ಥಳಿಸುತ್ತಿರುವುದು ವೀಡಿಯೋದಲ್ಲಿ ಸೆರೆಯಾಗಿದೆ.
ವಯೋವೃದ್ಧರಿಗೆ ಹಲ್ಲೆ ನಡೆಸುತ್ತಿರುವ ಸಂದರ್ಭದಲ್ಲಿ ಅಶ್ಲೀಲ ಪದ ಬಳಸುತ್ತಿರುವುದು ವೀಡಿಯೋದಲ್ಲಿ ಸೆರೆಯಾಗಿದೆ.
ಮಧ್ಯಪ್ರದೇಶದ ಗುಲ್ಶನ್ ನಗರದ ಮಾವ್ ರಫೀಕ್ ಎಂಬವರ ಮೇಲೆ ಪೊಲೀಸರು ಮೃಗೀಯವಾಗಿ ಹಲ್ಲೆ ನಡೆಸಿದ್ದಾರೆ.
ಪೊಲೀಸರ ಅಮಾನುಷ ನಡೆಗೆ ನೆಟ್ಟಿಗರಿಂದ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ಇತ್ತೀಚೆಗೆ ರಾಮನವಮಿ ಮೆರವಣಿಗೆ ವೇಳೆ ಮುಸ್ಲಿಮರನ್ನು ಗುರಿಯಾಗಿಸಿ ನಡೆದ ಗಲಭೆಯಲ್ಲಿ ಹಲವು ಮನೆಗಳನ್ನು ಧ್ವಂಸ ನಡೆಸಲಾಗಿದ್ದು, ಹಲವರ ಮೇಲೆ ಮಾರಣಾಂತಿಕವಾಗಿ ಥಳಿಸಲಾಗಿತ್ತು.