ಕೊಲೆ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಬಿಜೆಪಿ ನಾಯಕನ ಅಕ್ರಮ ಹೋಟೆಲ್ ಕಟ್ಟಡ ಧ್ವಂಸ

Prasthutha|

ಸಾಗರ್: ಕೊಲೆ ಪ್ರಕರಣವೊಂದರಲ್ಲಿ ತಲೆಮರೆಸಿಕೊಂಡಿರುವ ಬಿಜೆಪಿ ನಾಯಕ ಮಿಶ್ರಿ ಚಂದ್ ಗುಪ್ತಾ ಅವರ ಅಕ್ರಮ ಹೋಟೆಲ್ ಕಟ್ಟಡವನ್ನು ಜಿಲ್ಲಾಡಳಿತವು ನೆಲಸಮಗೊಳಿಸಿದ ಘಟನೆ ಮಧ್ಯಪ್ರದೇಶದಲ್ಲಿ ಮಂಗಳವಾರ ನಡೆದಿದೆ.

- Advertisement -

ಸುದ್ದಿಸಂಸ್ಥೆ ‘ಎಎನ್‌ಐ’ ಈ ಕುರಿತ ವೀಡಿಯೋ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದೆ.

ಡಿಸೆಂಬರ್ 22ರಂದು ಜಗದೀಶ್ ಯಾದವ್ ಎಂಬ ವ್ಯಕ್ತಿಯ ಮೇಲೆ ಎಸ್‌ಯುವಿ ಕಾರನ್ನು ಹರಿಸಿ ಹತ್ಯೆಗೈಯಲಾಗಿತ್ತು. ಹತ್ಯೆ ಪ್ರಕರಣದಲ್ಲಿ ಮಿಶ್ರಿ ವಿರುದ್ಧ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ಭುಗಿಲೆದ್ದಿತ್ತು.

- Advertisement -

 ಸದ್ಯ ತಲೆಮರೆಸಿಕೊಂಡಿರುವ ಬಿಜೆಪಿ ನಾಯಕ ಮಿಶ್ರಿ ಚಂದ್ ಗುಪ್ತಾ ಅವರ ಅಕ್ರಮ ಹೋಟೆಲ್ ಕಟ್ಟಡವನ್ನು ಇಂದೋರ್‌ನ ವಿಶೇಷ ತಂಡ ಸ್ಫೋಟಕಗಳನ್ನು ಬಳಸಿ ಕೆಲವೇ ಸೆಕೆಂಡುಗಳಲ್ಲಿ ನೆಲಸಮಗೊಳಿಸಿದೆ.

ಸಾಗರ್ ಜಿಲ್ಲಾಧಿಕಾರಿ ದೀಪಕ್ ಆರ್ಯ, ಡಿಐಜಿ ತರುಣ್ ನಾಯಕ ಸೇರಿದಂತೆ ಇತರೆ ಅಧಿಕಾರಿಗಳು ಕಾರ್ಯಾಚರಣೆಗೆ ನೇತೃತ್ವ ವಹಿಸಿದ್ದರು.

Join Whatsapp