ಚಾಲಕನ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಬಿದ್ದ ಕಾರು; ನಾಲ್ವರು ಗಂಭೀರ

Prasthutha|

ಕ್ಯಾಲಿಫೊರ್ನಿಯ: ಚಾಲಕನ ನಿಯಂತ್ರಣ ತಪ್ಪಿದ ಕಾರು ಬರೋಬ್ಬರಿ 300 ಅಡಿ ಆಳದ ಬಂಡೆಗಳಿರುವ ಪ್ರಪಾತಕ್ಕೆ ಬಿದ್ದಿರುವ ಘಟನೆ ಕ್ಯಾಲಿಫೊರ್ನಿಯ ಸಮೀಪದ ಸಮುದ್ರ ತೀರದಲ್ಲಿರುವ ಡೆವಿಲ್ ಸ್ಲೈಡ್ ಎಂಬ ಕಡಿದಾದ ಬೆಟ್ಟಗುಡ್ಡ ಪ್ರದೇಶದಲ್ಲಿ ನಡೆದಿದೆ.

- Advertisement -


ಕುಟುಂಬವೊಂದು ಪ್ರಯಾಣಿಸುತ್ತಿದ್ದ ಟೆಸ್ಲಾ ಕಂಪೆನಿಯ ಕಾರು ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗಿದ್ದು, ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.


ಕಾರಿನಲ್ಲಿದ್ದ ಇಬ್ಬರು ಮಕ್ಕಳು ಹಾಗೂ ಇಬ್ಬರು ವಯಸ್ಕರರಿಗೆ ಗಂಭೀರ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸುದ್ದಿ ತಿಳಿದ ಕೂಡಲೇ ರಕ್ಷಣಾ ಕಾರ್ಯಾಚರಣೆ ತಂಡ ಹೆಲಿಕಾಪ್ಟರ್ನಲ್ಲಿ ಆಗಮಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದೆ.

- Advertisement -


ಕ್ಯಾಲಿಪೋರ್ನಿಯಾ ಆಸ್ಪತ್ರೆಯಲ್ಲಿ ಗಾಯಾಳುಗಳು ಚೇತರಿಸಿಕೊಳ್ಳುತ್ತಿದ್ದು, ಜೀವಕ್ಕೆ ಅಪಾಯವಿಲ್ಲವೆಂದು ವೈದ್ಯರು ತಿಳಿಸಿದ್ದಾರೆ.
ಘಟನೆ ಸಂದರ್ಭದಲ್ಲಿ ಕಾರು ಅತ್ಯಂತ ಭಯಾನಕವಾಗಿ ಹಾನಿಯಾಗಿದೆ. ಆದರೂ ಪವಾಡಸದೃಶ್ಯವಾಗಿ ಕಾರಿನಲ್ಲಿದ್ದವರು ಬದಕುಳಿದಿದ್ದಾರೆ.

Join Whatsapp