ಮಧ್ಯಪ್ರದೇಶ: ತಲೆಯ ಗಾಯಕ್ಕೆ ಕಾಂಡೋಮ್‌ನ ಕವರ್‌‌ ಇಟ್ಟು ಬ್ಯಾಂಡೇಜ್; ಸಿಬ್ಬಂದಿ ಅಮಾನತು

Prasthutha|

ಭೋಪಾಲ್: ವೃದ್ಧೆಯೊಬ್ಬರ ತಲೆಯ ಗಾಯಕ್ಕೆ ಕಾಂಡೋಮ್‌ನ  ಕವರ್‌‌ ಇಟ್ಟು ಬ್ಯಾಂಡೇಜ್ ಮಾಡಿರುವ ಘಟನೆ ಮಧ್ಯಪ್ರದೇಶದ ಮೊರೆನಾ ಜಿಲ್ಲೆಯ ಪೋರ್ಸಾದಲ್ಲಿ ನಡೆದಿದೆ.

- Advertisement -

ಸಂತ್ರಸ್ತ ಮಹಿಳೆಯನ್ನು ರೇಷ್ಮಾ ಬಾಯಿ ಎಂದು ಗುರುತಿಸಲಾಗಿದೆ. ತಲೆಯಲ್ಲಿ ತೀವ್ರವಾದ ಗಾಯವುಂಟಾದ ಕಾರಣ ಮೊರೆನಾದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು  ಆರೋಗ್ಯ ಕೇಂದ್ರದ ಸಿಬ್ಬಂದಿಯಿಂದ ಈ ಅಮಾನವೀಯ ಕೃತ್ಯ ನಡೆದಿದೆ ಎನ್ನಲಾಗಿದೆ.

ಗಾಯದಿಂದ ಉಂಟಾಗುವ ರಕ್ತಸ್ರಾವವನ್ನು ತಡೆಯಲು ಹತ್ತಿಯ ಜೊತೆಗೆ, ಮಹಿಳೆಯ ತಲೆಯ ಮೇಲೆ ಕಾಂಡೋಮ್‌ನ ಕವರ್‌ ಇಟ್ಟು ಬ್ಯಾಂಡೇಜ್ ಮಾಡಲಾಗಿದೆ. ಇದನ್ನು ಅಲ್ಲಿದ್ದಂತಹ ಸ್ಥಳೀಯರು ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ.

- Advertisement -

ಆರೋಗ್ಯ ಕೇಂದ್ರದಲ್ಲಿ ಮಹಿಳೆಗೆ ಬ್ಯಾಂಡೇಜ್ ಮಾಡಿದ್ದ ಸಿಬ್ಬಂದಿಯನ್ನು ರಾಜ್ಯ ಆರೋಗ್ಯ ಇಲಾಖೆ ಅಮಾನತುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದು, ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Join Whatsapp