ಮಂಗಳೂರು: ಪಠ್ಯ ಪುಸ್ತಕ ಪರಿಷ್ಕರಣೆ | ನಮ್ಮ ಮಕ್ಕಳು ಒಳ್ಳೆಯದನ್ನು ಕಲಿಯಲು ಈ ತೀರ್ಮಾನ ಎಂದ ಮಧು ಬಂಗಾರಪ್ಪ

Prasthutha|

NEP ಬದಲಾಯಿಸಿ, SEP ಜಾರಿ

- Advertisement -


ಮಂಗಳೂರು: ನಮ್ಮ ಮಕ್ಕಳು ಒಳ್ಳೆಯದನ್ನು ಕಲಿಯಲು ಪಠ್ಯ ಪುಸ್ತಕ ಪರಿಷ್ಕರಣೆ ಮಾಡುತ್ತೇವೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.


ಈ ಬಗ್ಗೆ ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸರಕಾರ ಪ್ರಣಾಳಿಕೆಯಲ್ಲಿರುವ ಎಲ್ಲಾ ಭರವಸೆಗಳನ್ನು ಈಡೇರಿಸಲಿದೆ. ಮಕ್ಕಳ ಭವಿಷ್ಯದ ದೃಷ್ಟಿಯಿಂದ ಎನ್ ಇ ಪಿ ಯನ್ನು ದೂರ ಇಟ್ಟು ಎಸ್ ಇ ಪಿ ಜಾರಿಗೆ ತರಲಾಗುತ್ತದೆ. ಮಕ್ಕಳ ಕಲಿಕೆ ತಿಳುವಳಿಕೆಗೆ ಅನುಕೂಲ ಮಾಡಲು ತಜ್ಞರ ಸಮಿತಿ ಮೂಲಕ ಪಠ್ಯ ಪರಿಷ್ಕರಣೆಯಾಗಲಿದೆ ಎಂದರು.

- Advertisement -


ವಿದ್ಯಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ಸರಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಒಂದರಿಂದ ಹತ್ತನೇ ಕ್ಲಾಸ್ ವರೆಗೆ ವಾರಕ್ಕೆ ಎರಡು ದಿನ ಮೊಟ್ಟೆ ಅಥವಾ ಚಿಕ್ಕಿ ಅಥವಾ ಬಾಳೆಹಣ್ಣು ನೀಡುತ್ತೇವೆ. ಬಡ ಮಕ್ಕಳ ಪೌಷ್ಟಿಕಾಂಶ ಹೆಚ್ಚಿಸಲು ಈ ಕ್ರಮ ಎಂದರು. 25 ಸಾವಿರಕ್ಕೂ ಹೆಚ್ಚು ಸರಕಾರಿ ಶಿಕ್ಷಕರ ವರ್ಗಾವಣೆಯಾಗಿದೆ. ಅಲ್ಪಾವಧಿಯಲ್ಲೇ ಇಷ್ಟು ದೊಡ್ಡ ವರ್ಗಾವಣೆ ಮಾಡಲಾಗಿದ್ದು ದಾಖಲೆ ಎಂದರು.


ಅರಣ್ಯ ಇಲಾಖೆ ಜೊತೆ ಸೇರಿ 50 ಲಕ್ಷ ಸಸಿಗಳನ್ನು ನೆಡುವ ಕಾರ್ಯಕ್ರಮ ಹಾಕಿದ್ದೇವೆ ಎಂದರು.


ಸದ್ಯಕ್ಕೆ ಬಿಜೆಪಿ ಸರಕಾರ ಪರಿಷ್ಕರಣೆ ಮಾಡಿರುವ ಪಠ್ಯ ಕೈಬಿಟ್ಟು ಹಿಂದಿನ ಪಠ್ಯ ತಂದಿದ್ದೇವೆ. ಕುಮಾರಸ್ವಾಮಿಯವರು ಸರಕಾರದ ವಿರುದ್ದ ಮಾತಾಡಿದರೆ ಸರಕಾರ ಬಿದ್ದು ಹೋಗಲ್ಲ. ಕುಮಾರಸ್ವಾಮಿಯವರ ಇಂತಹ ನಡೆಗಳ ಕಾರಣಕ್ಕೆ ನನ್ನಂತವರು ಅಲ್ಲಿಂದ ಹೊರಬಂದಿದ್ದೇವೆ ಎಂದರು.


ಗ್ಯಾರಂಟಿ ಯೋಜನೆಗಳ ಬಗ್ಗೆ ಬಿಜೆಪಿ ಅಪಪ್ರಚಾರ ಮಾಡುತ್ತಿದೆ. ಕಟೀಲ್ ಅವರು ಅಭಿವೃದ್ಧಿ ಬೇಡ, ಭಾವನಾತ್ಮಕ ವಿಚಾರದಲ್ಲಿ ಚುನಾವಣೆಗೆ ಹೋದರು. ರಾಜ್ಯದ ಜನರು ತಕ್ಕ ಪಾಠ ಕಲಿಸಿದರು ಎಂದರು.


ಬಿಜೆಪಿಯವರ ಜೀವನ ಕೂಡ ಗ್ಯಾರಂಟಿ ಯೋಜನೆಯಲ್ಲೇ ಸಾಗುತ್ತೆ. ಗ್ಯಾರಂಟಿ ಯೋಜನೆಗಳು ಸಮಾಜದಲ್ಲಿ ಆರ್ಥಿಕತೆಗೆ ವೇಗ ನೀಡುತ್ತದೆ. ಬಡವರ ಕೈಗೆ ದುಡ್ಡು ಹೋದರೆ ಅದು ವಾಪಸ್ ಬರುತ್ತೆ ಎಂದರು.



Join Whatsapp