ಹೊಸದಿಲ್ಲಿ: ಎಲ್’ಟಿಟಿಇ ಮುಖ್ಯಸ್ಥ ಪ್ರಭಾಕರನ್ ಜೀವಂತವಿದ್ದಾರೆ ಎಂದು ಕಾಂಗ್ರೆಸ್’ನ ಮಾಜಿ ನಾಯಕ ಪಾಜಾ ನೆಡುಮಾರನ್ ಹೇಳಿಕೆ ನೀಡಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ.
ಪ್ರಭಾಕರನ್ ಸಾವನ್ನಪ್ಪಿದ್ದಾರೆ ಎಂದು ಶ್ರೀಲಂಕಾ ಸರ್ಕಾರ ಘೋಷಿಸಿದ ಹದಿನಾಲ್ಕು ವರ್ಷಗಳ ಬಳಿಕ ಹೊರಬಿದ್ದ ಈ ಹೇಳಿಕೆ ಶ್ರೀಲಂಕಾ ಮತ್ತು ಭಾರತದ ರಾಜಕಾರಣದಲ್ಲಿ ಹೊಸ ಚರ್ಚೆ ಹುಟ್ಟುಹಾಕಿದೆ.
ಪ್ರಭಾಕರನ್ ಜೀವಂತವಾಗಿದ್ದಾರೆ ಮತ್ತು ಆರೋಗ್ಯವಾಗಿದ್ದು ಶೀಘ್ರದಲ್ಲೇ ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ನೆಡುಮಾರನ್ ಹೇಳಿದ್ದಾರೆ.
ಶೀಘ್ರದಲ್ಲೇ ಪ್ರಭಾಕರನ್ ಜನರ ಮುಂದೆ ಬರಲಿದ್ದಾರೆ. ತಮಿಳು ಜನರಿಗೆ ಈ ಶುಭ ಸುದ್ದಿಯನ್ನು ತಿಳಿಸಲು ನನಗೆ ಹೆಮ್ಮೆಯಾಗುತ್ತಿದೆ. ಪ್ರಭಾಕರನ್ ಕುರಿತ ಎಲ್ಲಾ ವದಂತಿಗಳಿಗೆ ಶೀಘ್ರದಲ್ಲೇ ತೆರೆ ಬೀಳಲಿದೆ ಎಂದು ನೆಡುಮಾರನ್ ಹೇಳಿದ್ದಾರೆ.
ಮೇ 2009 ರಲ್ಲಿ ಶ್ರೀಲಂಕಾ ಸೇನೆಯು ಎಲ್ ಟಿಟಿಇ ಚಟುವಟಿಕೆಗಳ ವಿರುದ್ಧ ನಡೆಸಿದ ಕಾರ್ಯಾಚರಣೆಯಲ್ಲಿ ಪ್ರಭಾಕರನ್ ಕೊಲ್ಲಲ್ಪಟ್ಟಿದ್ದಾನೆ ಎಂದು ಶ್ರೀಲಂಕಾ ಘೋಷಿಸಿತ್ತು.