ಟೋಕಿಯೋ ಒಲಿಂಪಿಕ್ಸ್-ಬಾಕ್ಸಿಂಗ್; ಭಾರತಕ್ಕೆ ಎರಡನೇ ಪದಕ ಖಚಿತ ಪಡಿಸಿದ ಲೊವ್ಲಿನಾ

Prasthutha|

ಟೋಕಿಯೋ, ಜು.30; ಮಹಿಳಾ ಬಾಕ್ಸಿಂಗ್ ಕ್ವಾರ್ಟರ್ ಫೈನಲ್‌ ನಲ್ಲಿ ಲೊವ್ಲಿನಾ ಬೊರ್ಗೊಹೈನ್ ಚೈನೀಸ್‌ತೈಪೆಯ ಚೆನ್‌ನೀನ್‌ಚಿನ್‌ವಿರುದ್ಧ 4-1 ಅಂತರದಲ್ಲಿ ಜಯಿಸುವ ಮೂಲಕ ಸೆಮಿಫೈನಲ್‌ ಗೆ ಲಗ್ಗೆಯಿಟ್ಟಿದ್ದಾರೆ. ಇದರ ಜತೆಗೆ ಒಲಿಂಪಿಕ್ಸ್‌ ನಲ್ಲಿ ಕಂಚಿನ ಪದಕವನ್ನು ಖಚಿತಪಡಿಸಿಕೊಂಡಿದ್ದಾರೆ.

- Advertisement -

ಮಹಿಳಾ ವಾಲ್ಟರ್‌ ವೇಟ್‌ವಿಭಾಗದಲ್ಲಿ ಚೈನೀಸ್‌ತೈಪೆಯ ಚೆನ್‌ನೀನ್‌ಚಿನ್‌ಎದುರು ಪ್ರಾಬಲ್ಯ ಮೆರದ ಲೊವ್ಲಿನಾ ಬೊರ್ಗೊಹೈನ್ ಸೆಮಿಫೈನಲ್‌ಪ್ರವೇಶಿಸುವ ಮೂಲಕ ಇಡೀ ದೇಶವೇ ಸಂಭ್ರಮಿಸುವಂತೆ ಮಾಡಿದ್ದಾರೆ. ಲೊವ್ಲಿನಾ ಬೊರ್ಗೊಹೈನ್ ಇದೀಗ ಕಂಚಿನ ಪದಕ ಖಚಿತ ಪಡಿಸಿಕೊಂಡಿದ್ದು, ಸೆಮಿಫೈನಲ್‌ ನಲ್ಲಿ ಗೆಲುವು ದಾಖಲಿಸಿದರೆ ಚಿನ್ನ ಅಥವಾ ಬೆಳ್ಳಿ ಪದಕಕ್ಕಾಗಿ ಫೈಪೋಟಿ ನಡೆಸಬಹುದಾಗಿದೆ. ಒಂದು ವೇಳೆ ಸೆಮೀಸ್‌ ನಲ್ಲಿ ಲೊವ್ಲಿನಾ ಬೊರ್ಗೊಹೈನ್ ಸೋತರೂ ಕಂಚಿನ ಪದಕ ಭಾರತೀಯ ಬಾಕ್ಸರ್ ಪಾಲಾಗಲಿದೆ.

ಗುರುವಾರವಷ್ಟೇ ಲಂಡನ್ ಒಲಿಂಪಿಕ್ಸ್‌ಕಂಚಿನ ಪದಕ ವಿಜೇತೆ ಮೇರಿ ಕೋಮ್‌ಪ್ರೀಕ್ವಾರ್ಟರ್‌ಫೈನಲ್‌ ನಲ್ಲಿ ಮುಗ್ಗರಿಸುವ ಮೂಲಕ ನಿರಾಸೆ ಅನುಭವಿಸಿದ್ದರು. ಆದರೆ ಇಂದು ಲೊವ್ಲಿನಾ ಬೊರ್ಗೊಹೈನ್ ಕಂಚಿನ ಪದಕ ಗೆಲ್ಲುವ ಮೂಲಕ ಇಡೀ ದೇಶವೇ ಕುಣಿದು ಕುಪ್ಪಳಿಸುವಂತೆ ಮಾಡಿದ್ದಾರೆ.

- Advertisement -

ಟೋಕಿಯೋ ಒಲಿಂಪಿಕ್ಸ್‌ ನಲ್ಲಿ ಈಗಾಗಲೇ ವೇಟ್‌ ಲಿಫ್ಟರ್‌ಮೀರಾಬಾಯಿ ಚಾನು ಬೆಳ್ಳಿ ಪದಕ ಜಯಿಸಿದ್ದಾರೆ. ಇದೀಗ ಲೊವ್ಲಿನಾ ಬೊರ್ಗೊಹೈನ್ ಸೆಮಿಫೈನಲ್ ಪ್ರವೇಶಿಸುವ ಮೂಲಕ ಮತ್ತೊಂದು ಪದಕ ಭಾರತದ ಪಾಲಾದಂತೆ ಆಗಿದೆ.

Join Whatsapp