‘ಲವ್ ಜಿಹಾದ್’ : ಸೀತಾಪುರದಲ್ಲಿ ಮುಸ್ಲಿಮರ ಮೇಲೆ ದೌರ್ಜನ್ಯ | ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ ಜೆಯುಎಚ್

Prasthutha|

ನವದೆಹಲಿ : ಉತ್ತರ ಪ್ರದೇಶದ ಸೀತಾಪುರ ಜಿಲ್ಲೆಯಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ಹಲವರ ವಿರುದ್ಧ ‘ಲವ್ ಜಿಹಾದ್’ ಕಾನೂನಿನಡಿ ದಾಖಲಾಗಿರುವ ಪ್ರಕರಣ ರದ್ದುಗೊಳಿಸುವಂತೆ ಕೋರಿ ಜಮೀಯತ್ ಉಲಮಾ ಎ ಹಿಂದ್ (ಜೆಯುಎಚ್) ಅಲಹಾಬಾದ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದೆ.

- Advertisement -

ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಒಂದೇ ಕುಟುಂಬದ 13 ಮಂದಿಯನ್ನು ಬಂಧಿಸಿದ್ದಾರೆ. ಮಕು ಬೆಹಾದ್ ಗ್ರಾಮದ ಜುಬ್ರಯೀಲ್ (24) ಮತ್ತು ನೀತು ಶುಕ್ಲಾ (19) ನ.24ರಂದು ಪರಾರಿಯಾಗಿದ್ದರು. ನ.26ರಂದು ಹುಡುಗಿಯ ತಂದೆ ದೂರು ಸಲ್ಲಿಸಿ, ಮಗಳನ್ನು ಬಲವಂತವಾಗಿ ಮದುವೆಯಾಗಲು ಅಪಹರಿಸಲಾಗಿದೆ ಎಂದು ಆಪಾದಿಸಿದ್ದರು.

ಜುಬ್ರಯೀಲ್ ಮತ್ತು ನೀತು ಪತ್ತೆಯಾಗಿಲ್ಲ. ಅವರನ್ನು ಪತ್ತೆ ಹಚ್ಚಲು ಪೊಲೀಸ್ ತಂಡಗಳನ್ನು ರಚಿಸಲಾಗಿದೆ. ಆದರೆ, ಇಲ್ಲಿ ವರೆಗೂ ಅವರ ಪತ್ತೆಯಾಗಿಲ್ಲ.

- Advertisement -

ಜುಬ್ರಿಯೀಲ್ ಕುಟುಂಬದ 13 ಮಂದಿಯನ್ನು ಬಂಧಿಸಲಾಗಿದೆ. ಅವರು ನೀತುಳನ್ನು ಅಪಹರಿಸುವ ಮತ್ತು ಬಲವಂತದ ಮತಾಂತರದ ಉದ್ದೇಶ ಹೊಂದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಇಲ್ಲಿ ವರೆಗೆ 30ಕ್ಕೂ ಹೆಚ್ಚು ಮಂದಿಯನ್ನು ವಿಚಾರಣೆ ನಡೆಸಲಾಗಿದೆ.

ಪೊಲೀಸರ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿದರು ಜೆಯುಎಚ್, ‘ಲವ್ ಜಿಹಾದ್’ ಹೆಸರಿನಲ್ಲಿ ಸರಕಾರ ಮುಸ್ಲಿಮರಿಗೆ ಕಿರುಕುಳ ನೀಡುತ್ತಿದೆ ಎಂದು ಜೆಯುಎಚ್ ತಿಳಿಸಿದೆ.  

Join Whatsapp