ಲವ್ ಜಿಹಾದ್, ಹಿಜಾಬ್ ವಿವಾದ ಮಾಡಿ ಶಿಕ್ಷಣ ಕ್ಷೇತ್ರದಲ್ಲಿ ಹೆಸರು ಮಾಡಿದ್ದಂತಹ ದ.ಕ. ಜಿಲ್ಲೆಯನ್ನು 18ನೇ ಸ್ಥಾನಕ್ಕೆ ದೂಡಿದರು: ಸಿದ್ದರಾಮಯ್ಯ ವಾಗ್ದಾಳಿ

Prasthutha|

►ಪೆನ್ ಬದಲು ತಲವಾರು, ತ್ರಿಶೂಲ, ಚಾಕು, ಚೂರಿ ಕೊಡುತ್ತಾರೆ

- Advertisement -


►ಪ್ರವೀಣ್ ನೆಟ್ಟಾರು ಕೊಲೆಯ ಮಂಪರು ಪರೀಕ್ಷೆ ಮಾಡಿದರೇ ಸಂಸದರೇ ಸಿಕ್ಕಿ ಹಾಕಿಕೊಳ್ಳುವುದರಲ್ಲಿ ಸಂಶಯವಿಲ್ಲ

ಉಳ್ಳಾಲ: ಲವ್ ಜಿಹಾದ್, ಹಿಜಾಬ್, ಹಲಾಲ್ ಮಾಡಿ ಶಿಕ್ಷಣ ಕ್ಷೇತ್ರದಲ್ಲಿ ಹೆಸರು ಮಾಡಿದ್ದಂತಹ ಉಡುಪಿ ಜಿಲ್ಲೆ, ಮಂಗಳೂರು ಜಿಲ್ಲೆ 18ನೇ ಸ್ಥಾನಕ್ಕೆ ದೂಡಿದರು. ಪೆನ್ ಬದಲು ತಲವಾರು, ತ್ರಿಶೂಲ, ಚಾಕು, ಚೂರಿ ಕೊಡುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

- Advertisement -


ಈ ಬಗ್ಗೆ ಹರೇಕಳ ಕಡವಿನಬಳಿಯ ಯು.ಟಿ. ಫರೀದ್ ವೇದಿಕೆಯಲ್ಲಿ ಜರಗಿದ ಉಳ್ಳಾಲ ಮತ್ತು ಮುಡಿಪು ಬ್ಲಾಕ್ ಕಾಂಗ್ರೆಸ್ ಬೃಹತ್ ಸಾರ್ವಜನಿಕ ಜನಜಾಗೃತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮಕ್ಕಳ ಭವಿಷ್ಯ ಯೋಚನೆ ಮಾಡಿ. ಅಬ್ಬಕ್ಕನ ನೆಲ ರಣಹೇಡಿಗಳ ನೆಲವಲ್ಲ. ಅನ್ಯೋನ್ಯವಾಗಿ ಕ್ರಿಶ್ಚಿಯನ್, ಹಿಂದೂ, ಮುಸ್ಲಿಮ್ , ಜೈನರು ಬಾಳಿದ ಜಿಲ್ಲೆಯನ್ನು ಹಿಂದೆ ಬೀಳಲು ಬಿಡಬೇಡಿ ಎಂದರು.


ದಕ್ಷಿಣ ಕನ್ನಡ ಜಿಲ್ಲೆ ಹಿಂದುತ್ವದ ಫ್ಯಾಕ್ಟರಿ, ಕೋಮುವಾದ ಇಲ್ಲಿಂದಲೇ ಆರಂಭವಾಗಿದೆ. ಕೋಮುವಾದದ ಬೀಜ ಇಲ್ಲಿನ ಲ್ಯಾಬ್ ನಿಂದಲೇ ಉತ್ಪತ್ತಿಯಾಗುತ್ತಿದೆ. ಪ್ರವೀಣ್ ನೆಟ್ಟಾರು ಕೊಲೆಯ ಮಂಪರು ಪರೀಕ್ಷೆ ಮಾಡಿದರೇ ಸಂಸದರೇ ಸಿಕ್ಕಿ ಹಾಕಿಕೊಳ್ಳುವುದರಲ್ಲಿ ಸಂಶಯವಿಲ್ಲ ಎಂದರು.
ಅಧಿಕಾರಕ್ಕೆ ಬಂದ ನಂತರ ಭರವಸೆಗಳನ್ನು ಮರೆತು ಸಮಾಜ ಒಡೆಯುವ ಕೆಲಸಕ್ಕೆ ಬಿಜೆಪಿಯವರು ಮುಂದಾಗುತ್ತಾರೆ. ಬಹುತ್ವದ ದೇಶ ಎಲ್ಲರೂ ಒಗ್ಗಟ್ಟಿನಲ್ಲಿರುವ ದೇಶ. ಈಗಿನ ಡಬಲ್ ಇಂಜಿನ್ ಸರಕಾರ ಎಲ್ಲವನ್ನೂ ಮುರಿದುಹಾಕಿದೆ. ಜನಸಂಖ್ಯೆಯಲ್ಲಿ ಭಾರತ ವಿಶ್ವದಲ್ಲಿ ನಂ. 1 ಆಗಲಿದೆ. ಎಲ್ಲರಿಗೂ ರಕ್ಷಣೆ ಸಿಗಬೇಕು, ಸಂವಿಧಾನದಲ್ಲಿ ಎಲ್ಲರೂ ಸಮಾನ ಎಂದು ಅಂಬೇಡ್ಕರ್ ಬರೆದುಕೊಟ್ಟಿದ್ದಾರೆ. ಯಾರು ಯಾವ ಧರ್ಮವನ್ನೂ ಅನುಸರಿಸಬಹುದು ಎಂದು ಹೇಳಲಾಗಿದೆ. ಆದರೆ ಸಮಾನ ಅವಕಾಶ, ಸಮಾನ ಹಕ್ಕು ಎಲ್ಲವನ್ನೂ ನಶಿಸಿಹಾಕಲಾಗುತ್ತಿದೆ ಎಂದು ಹೇಳಿದ್ದಾರೆ.


ಬಿಜೆಪಿಯವರಿಗೆ ಅಸಮಾನತೆಯ ಸಮಾಜ ಬೇಕಿದೆ. ಜಾತಿ ವ್ಯವಸ್ಥೆಯನ್ನು ನಿರ್ಮಿಸಿ ಒಂದು ಜಾತಿಯವರನ್ನು ಇನ್ನೊಂದು ಜಾತಿಗೆ ಎತ್ತಿಕಟ್ಟಲು ಸಾಧ್ಯ. ಆರ್ಥಿಕತೆ, ಅಸಮಾನತೆಯಿದ್ದರೆ ದೌರ್ಜನ್ಯ ಮಾಡಲು ಸುಲಭವಾಗುತ್ತದೆ. ಸಂವಿಧಾನ ಬದಲಾವಣೆ ಮಾಡಲು ಹೇಳಿದಂತ ಅನಂತ್ ಕುಮಾರ್ ಹೆಗ್ಡೆ ಗ್ರಾ.ಪಂ ಸದಸ್ಯನಾಗಲೂ ನಾಲಾಯಕ್, ಮೋದಿ, ಶಾ ಅಂತಹವರನ್ನು ಬೆಂಬಲಿಸಿ ಸಂವಿಧಾನ ವಿರೋಧಿಗಳು ಎಂದು ತೋರಿಸಿಕೊಟ್ಟಿದ್ದಾರೆ. ಪರೇಶ್ ಮೇಸ್ತಾ ಸಾವನ್ನು ಕಾಂಗ್ರೆಸ್ ನವರು ಕೊಲೆ ಮಾಡಿದ್ದಾರೆ ಅಂದರು. ತಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸಿಬಿಐಗೆ ವಹಿಸಿದ್ದೆ. ಕೊಲೆಯಲ್ಲ ಇದೊಂದು ಆಕಸ್ಮಿಕ ಸಾವು ಎಂದು ವರದಿ ನೀಡಿತು. ಇಂತಹ ಅನೇಕ ಕೊಲೆಗಳನ್ನು ಬೇರೆಯವರ ಮೇಲೆ ಎತ್ತಿಕಟ್ಟುವ ಕೆಲಸ ದ.ಕ ಜಿಲ್ಲೆಯಲ್ಲಿ ಆಗಿದೆ. ಈಗಿನ ಮುಖ್ಯಮಂತ್ರಿ ಏಳು ಕೋಟಿ ಕನ್ನಡಿಗರ ಮುಖ್ಯಮಂತ್ರಿ, ಆರ್ ಎಸ್ ಎಸ್ ಮುಖ್ಯಮಂತ್ರಿಯಲ್ಲ. ಅಲ್ಪಸಂಖ್ಯಾತರ ಕೊಲೆಯಾದ ಮನೆಗೇ ಹೋಗುವುದಿಲ್ಲ. ಸರಕಾರದ ಖಜಾನೆ ಜನರ ತೆರಿಗೆಯಿಂದ ಬರುವ ಆದಾಯವನ್ನು ಒಂದೇ ಕಡೆಗೆ ಪರಿಹಾರ ನೀಡಿ. ಆರ್ ಎಸ್ ಎಸ್ ನವರ ಕೈಗೊಂಬೆಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸ್ವಾತಂತ್ರ್ಯ ಹೋರಾಟದಲ್ಲಿ ಇರದ ಆರ್ ಎಸ್ ಎಸ್ ನವರು ರಾಷ್ಟ್ರಭಕ್ತಿ ಬಗ್ಗೆ ಮಾತನಾಡಲು ನೈತಿಕತೆಯ ಇಲ್ಲದವರು ಎಂದು ಹೇಳಿದ್ದಾರೆ.

Join Whatsapp