ಸ್ನೇಹಿತೆಯ ಹುಟ್ಟುಹಬ್ಬಕ್ಕೆ ಉ.ಪ್ರ.ಕ್ಕೆ ಹೋಗಿದ್ದ ಬೆಂಗಳೂರು ಮುಸ್ಲಿಂ ಯುವಕನಿಗೆ ಥಳಿತ | ‘ಲವ್ ಜಿಹಾದ್’ ಆರೋಪ

Prasthutha|

ಲಖನೌ : ಕರ್ನಾಟಕದ ಬೆಂಗಳೂರು ಮೂಲದ 21 ವರ್ಷದ ಮುಸ್ಲಿಮ್ ಯುವಕನೊಬ್ಬ ಉತ್ತರ ಪ್ರದೇಶದ ಲಖೀಂಪುರಕ್ಕೆ ತನ್ನ ಆನ್ ಲೈನ್ ಸ್ನೇಹಿತೆಯನ್ನು ಭೇಟಿಯಾಗಲು ತೆರಳಿದ್ದಾಗ, ಆತನಿಗೆ ಸ್ಥಳೀಯರು ಥಳಿಸಿ, ಬಲವಂತದ ಮತಾಂತರದ ಆರೋಪದಡಿ ಪೊಲೀಸ್ ವಶಕ್ಕೊಳಪಟ್ಟ ಘಟನೆ ನಡೆದಿದೆ.  

- Advertisement -

ಆತನ ವಿರುದ್ಧ ‘ಲವ್ ಜಿಹಾದ್’ ಕೇಸ್ ದಾಖಲಿಸುವಂತೆ ಸ್ಥಳೀಯ ಬಿಜೆಪಿ ಬೆಂಬಲಿಗ ಸಂಘಟನೆಗಳ ಕಾರ್ಯಕರ್ತರು ಒತ್ತಾಯಿಸಿದ್ದಾರೆ. ಆದರೆ, ಭಾನುವಾರ ಸಂಜೆ ಪೊಲೀಸರು ಆತನನ್ನು ವಶಕ್ಕೆ ಪಡೆದು, ಸೋಮವಾರ ಬಿಡುಗಡೆಗೊಳಿಸಿದ್ದಾರೆ.

21ರ ಹರೆಯದ ಯುವಕ ಬೆಂಗಳೂರು ಮೂಲದ ಐಟಿ ಕಂಪೆನಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದು, ಆನ್ ಲೈನ್ ಮೂಲಕ ಹುಡುಗಿಯ ಸ್ನೇಹಿತನಾಗಿದ್ದ. ಆಕೆಯ ಹುಟ್ಟುಹಬ್ಬವಾಗಿದ್ದ ಕಾರಣ, ಆಕೆಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಲು ಲಖೀಂಪುರ ಖೇರಿಯಲ್ಲಿರುವ ಆಕೆಯ ಮನೆಗೆ ಆತ ತೆರಳಿದ್ದ.

- Advertisement -

ಆತ ಹುಡುಗಿಯ ಹೆತ್ತವರ ಮುಂದೆ ಹೋಗಿ ನಿಂತಾಗ, ಸುತ್ತಮುತ್ತಲಿನವರಿಗೆ ವಿಷಯ ತಿಳಿದು, ಬಿಜೆಪಿ ಬೆಂಬಲಿತ ಸಂಘಟನೆಗಳ ಕಾರ್ಯಕರ್ತರು ನೆರೆಯಲಾರಂಭಿಸಿದರು. ಬಳಿಕ ಅವರು ಆತನಿಗೆ ಥಳಿಸಿ, ಪೊಲೀಸರ ವಶಕ್ಕೊಪ್ಪಿಸಿದರು.

“ಅವರು ನನ್ನನ್ನು ಥಳಿಸಿದರು. ಅವರಲ್ಲಿ ಒಬ್ಬ ಪೊಲೀಸರಿಗೆ ಫೋನ್ ಮಾಡಿ ಇದು ಬಲವಂತದ ಮತಾಂತರ ಎಂದು ತಿಳಿಸಿದ್ದ. ನನ್ನನ್ನು ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು. ನಾನು ನನ್ನ ವಿಮಾನ ಟಿಕೆಟ್ ಮತ್ತು ಉಡುಗೊರೆಗಳನ್ನು ತೋರಿಸಿದೆ” ಎಂದು ಯುವಕ ತಿಳಿಸಿದ್ದಾನೆ.

ಹುಡುಗಿಯ ಹೆತ್ತವರು ಎಫ್ ಐಆರ್ ದಾಖಲಿಸಲು ಮುಂದಾಗಲಿಲ್ಲ. ಹೀಗಾಗಿ ಸಿಆರ್ ಪಿಸಿ ಕಲಂ 151ರಡಿ ದೂರು ದಾಖಲಿಸಿ, ಆತನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು. ನ್ಯಾಯಾಲಯ ವೈಯಕ್ತಿಕ ಜಾಮೀನಿನ ಆಧಾರದಲ್ಲಿ ಆತನ ಬಿಡುಗಡೆಗೆ ಆದೇಶಿಸಿತು. ಹೀಗಾಗಿ ಆತ ಸೋಮವಾರವೇ ಬಿಡುಗಡೆಗೊಂಡಿದ್ದಾನೆ.

Join Whatsapp