ಪ್ರೇಮವೈಫಲ್ಯ ಹಿನ್ನೆಲೆ: 7 ಕಾರುಗಳ ಗಾಜು ಪುಡಿ ಮಾಡಿದ ಪಾಗಲ್ ಪ್ರೇಮಿ

Prasthutha|

ಬೆಂಗಳೂರು: ಪ್ರೀತಿಯಲ್ಲಿ ಬಿದ್ದ ಭಗ್ನ ಪಾಗಲ್ ಪ್ರೇಮಿಯೊಬ್ಬ ಕುಡಿದ ಅಮಲಿನಲ್ಲಿ ಏಳೆಂಟು ಕಾರುಗಳ ಗಾಜನ್ನು ಪುಡಿ ಪುಡಿ ಮಾಡಿರುವ ಘಟನೆ ಬಸವೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಇದೀಗ ಆರೋಪಿ ಪೊಲೀಸರ ಅತಿಥಿಯಾಗಿದ್ದಾನೆ.
ಮಹಾಲಕ್ಷ್ಮಿಲೇಔಟ್ ನ ಸತೀಶ್ (26) ಬಂಧಿತ ಆರೋಪಿ.

- Advertisement -

ಆರೋಪಿ ಸತೀಶ್ ಕುಡಿದ ಮತ್ತಿನಲ್ಲಿ ನಿನ್ನೆ ಮಧ್ಯರಾತ್ರಿ ಬೈಕ್ ನಲ್ಲಿ ಬಂದು ರಸ್ತೆ ಬದಿ ನಿಲ್ಲಿಸಿದ್ದ ಕಾರುಗಳ ಗಾಜು ಹೊಡೆದು ಪುಂಡಾಟ ಮೆರೆದಿದ್ದಾನೆ.
ಮಹಾಲಕ್ಷ್ಮೀ ಲೇಔಟ್ ಹಾಗೂ ಬಸವೇಶ್ವರನಗರದ ಮನೆಗಳ ಮುಂದೆ ರಸ್ತೆ ಬದಿ ನಿಲ್ಲಿಸಿದ್ದ 7-8 ಕಾರುಗಳ ಗಾಜನ್ನು ದೊಣ್ಣೆಯಿಂದ ಹೊಡೆದು ಮಾನಸಿಕನಂತೆ ವರ್ತಿಸಿದ್ದಾನೆ.

ಸುದ್ದಿ ತಿಳಿದ ತಕ್ಷಣವೇ ಸ್ಥಳಕ್ಕೆ ಧಾವಿಸಿದ ಬಸವೇಶ್ವರನಗರ ಪೊಲೀಸರು ಬೈಕ್ ನಲ್ಲಿ ಪರಾರಿಯಾಗುತ್ತಿದ್ದ ಆರೋಪಿಯನ್ನು ಬೆನ್ನಟ್ಟಿ ಬಂಧಿಸಿ ಜೈಲಿಗಟ್ಟಿದ್ದಾರೆ ಎಂದು ಡಿಸಿಪಿ ಡಾ ಸಂಜೀವ್ ಪಾಟೀಲ್ ತಿಳಿಸಿದ್ದಾರೆ.

Join Whatsapp