ಫೇಸ್ ಬುಕ್ ಪೋಸ್ಟ್ ವಿವಾದ | ಸೌದಿ ಜೈಲಿನಿಂದ ಬಿಡುಗಡೆಯಾದ ಮಂಗಳೂರಿನ ಹರೀಶ್ ಬಂಗೇರಾ

Prasthutha|

ಮಂಗಳೂರು : ಫೇಸ್ ಬುಕ್ ನಲ್ಲಿ ಪವಿತ್ರ ಮಕ್ಕಾ ಹಾಗೂ ಸೌದಿ ದೊರೆಯ ಬಗ್ಗೆ ಅವಹೇಳನ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ  ಸೌದಿ ಅರೇಬಿಯಾದಲ್ಲಿ ಬಂಧನಕ್ಕೊಳಪಟ್ಟಿರುವ ಕೋಟೇಶ್ವರ ಬೀಜಾಡಿ ಗ್ರಾಮದ ನಿವಾಸಿ ಹರೀಶ್‌ ಬಂಗೇರ ಎಸ್‌. ಅವರು ಜೈಲಿನಿಂದ ಬಿಡುಗಡೆಯಾಗಿ ಶೀಘ್ರದಲ್ಲೇ ತಾಯ್ನಾಡಿಗೆ ಮರಳಲಿದ್ದಾರೆ.

- Advertisement -

ಈ ಬಗ್ಗೆ ಮಂಗಳೂರು ಅಷೋಷಿಯೇಷನ್ ಸೌದಿ ಅರೇಬಿಯಾ(MASA) ಇದರ ಅಧ್ಯಕ್ಷರಾದ ಸತೀಶ್ ಕುಮಾರ್ ಬಜಾಲ್ , ಶೀಘ್ರದಲ್ಲೇ ತಾಯ್ನಾಡಿಗೆ ಮರಳಲಿದ್ದಾರೆ ಎಂದು ತಿಳಿಸಿದ್ದಾರೆ. ವಿಮಾನ ಪ್ರಯಾಣದ ವೆಚ್ಚವನ್ನು ಕೂಡಾ ಮಂಗಳೂರು ಅಷೋಷಿಯೇಷನ್ ನ ಪರವಾಗಿ ಜೈಲು ಅಧಿಕಾರಿಗಳಿಗೆ ನೀಡಲಾಗಿದೆ. ಇವರ ಬಿಡುಗಡೆಯ ಎಲ್ಲಾ ದಾಖಲೆ ಪತ್ರ ಪೂರ್ಣವಾಗಿದ್ದು ಅವರು ಭಾರತ ಪ್ರಯಾಣದ ಸಿದ್ಧತೆಯ ಕೊನೆಯ ಹಂತದಲ್ಲಿ ಇದ್ದಾರೆ ಎಂದು ಅವರು ತಿಳಿಸಿದ್ದಾರೆ.

ಇದಕ್ಕಾಗಿ ಸಹಕರಿಸಿದ, ಭಾರತ ರಾಯಭಾರಿ ಕಚೇರಿ (Indian embassy), IOF ( Indian overseas forum ) ಸಂಸ್ಥೆ , ಮನಿಕಂಠನ್, ಮಹಮ್ಮದ್ ಶರೀಫ್ ದಮ್ಮಾಮ್ , ಪ್ರಸನ್ನ ಭಟ್ ರಿಯಾದ್ , ಪ್ರಕಾಶ್ ಪೂಜಾರಿ ರಿಯಾದ್ , ಕಮಾಲಾಕ್ಷ ಅಡ್ಯಾರ್ ಅಲ್ ಕೋಬರ್ , ಜೋಯಿಸನ್ ಅಲ್ ಅಸಾ, ಹಾಗೂ ಅವರ ಬಿಡುಗಡೆಗೆ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಸಹಕರಿಸಿದ ಎಲ್ಲಾ ಬಂದು ಮಿತ್ರರಿಗೂ ಧನ್ಯವಾದಗಳನ್ನು ತಿಳಿಸಿದರು.

- Advertisement -

ಪೌರತ್ವ ಮಸೂದೆ ವಿರೋಧಿಸಿ 2019 ರ ಡಿಸೆಂಬರ್ ನಲ್ಲಿ ಮಂಗಳೂರಿನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಹರೀಶ್‌ ಬಂಗೇರ ಎಸ್‌. ಎನ್ನುವ ಫೇಸ್‌ಬುಕ್‌ ಖಾತೆಯಲ್ಲಿ ಧರ್ಮ ನಿಂದನೆ ಮತ್ತು ರಾಜದ್ರೋಹದ ವಿಷಯ ಇರುವ ಬರಹ ಪೋಸ್ಟ್ ಮಾಡಲಾಗಿತ್ತು. ಕೂಡಲೇ ಅಲ್ಲಿನ ಯುವಕರು ಹರೀಶ್‌ ಕೆಲಸ ನಿರ್ವಹಿಸುತ್ತಿರುವ ಕಚೇರಿಗೆ ತೆರಳಿ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು. ಇದಾದ ಬಳಿಕ ಘಟನೆಯ ಬಗ್ಗೆ ಹರೀಶ್‌ ಕ್ಷಮೆ ಕೇಳಿ ವೀಡಿಯೊವೊಂದನ್ನು ಅಪ್‌ ಲೋಡ್‌ ಮಾಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್‌ ಕೂಡ ಆಗಿತ್ತು. 2019 ರ ಡಿ.19 ರಾತ್ರಿ ತನ್ನ ಫೇಸ್‌ ಬುಕ್‌ ಖಾತೆಯನ್ನು ಡಿ-ಆಕ್ಟಿವೇಟ್‌ ಮಾಡಿದ್ದರು.

Join Whatsapp