ಅವಧಿ ಮುಗಿದ ಟೋಲ್ ರದ್ದು ಮಾಡುವಂತೆ ಲಾರಿ ಮಾಲೀಕರ ಸಂಘ ಒತ್ತಾಯ

Prasthutha|

ದಾವಣಗೆರೆ: ರಾಜ್ಯಾದ್ಯಂತ ವಿವಿಧ ಹೆದ್ದಾರಿಗಳಲ್ಲಿ ಇರುವ 42 ಟೋಲ್‌ಗೇಟ್‌ಗಳ ಪೈಕಿ 16 ಟೋಲ್‌ಗೇಟ್‌ಗಳ ಅವಧಿ ಪೂರ್ಣಗೊಂಡಿದ್ದು, ಅವುಗಳನ್ನು ರದ್ದು ಮಾಡಬೇಕು ಎಂದು ಕರ್ನಾಟಕ ಲಾರಿ ಮಾಲೀಕರ ಮತ್ತು ಏಜೆಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಜಿ. ಆರ್‌. ಷಣ್ಮುಖಪ್ಪ ಆಗ್ರಹಿಸಿದ್ದಾರೆ.

- Advertisement -

ರಾಜ್ಯಮಟ್ಟದ ಲಾರಿ ಮಾಲೀಕರ ಸಮಾವೇಶದಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿಯ ಗಬ್ಬೂರು ಕ್ರಾಸ್‌ ಬಳಿಯ ಟೋಲ್‌ಗೇಟ್‌ ಸಹಿತ 16 ಟೋಲ್‌ಗೇಟ್‌ಅವಧಿ ಮುಗಿದಿದೆ. ಹೆದ್ದಾರಿ ನಿರ್ಮಾಣಕ್ಕೆ ಖರ್ಚು ಮಾಡಿದ ಹತ್ತು ಪಟ್ಟು ಹಣ ವಸೂಲಾಗಿದೆ ಎಂದು ಹೇಳಿದರು.

ಚಿತ್ರದುರ್ಗ–ಹೊಸಪೇಟೆ ನಡುವಿನ ಹೆದ್ದಾರಿಯಲ್ಲಿ 30 ಕಿಲೋಮೀಟರ್‌ ವ್ಯಾಪ್ತಿಯಲ್ಲಿ ಮೂರು ಟೋಲ್‌ಗೇಟ್‌ಗಳಿವೆ. ಒಂದು ಟೋಲ್‌ಗೇಟ್‌ ಇಟ್ಟುಕೊಂಡು ಎರಡನ್ನು ರದ್ದು ಮಾಡಬೇಕು. ಎಲ್ಲ ಟೋಲ್‌ಗೇಟ್‌ಗಳಲ್ಲಿಯೂ ಕೃಷಿ ಉತ್ಪನ್ನಗಳಿಗೆ ಸಂಬಂಧಿಸಿದ ಸರಕು ಸಾಗಣೆ ಮಾಡುವಾಗ ಸುಂಕ ವಸೂಲಿ ಮಾಡಬಾರದು. ಸರಕು ಅನ್‌ಲೋಡ್‌ ಮಾಡಿ ವಾಪಸ್‌ ಖಾಲಿ ಬರುವ ಲಾರಿಗಳಿಗೆ ಟೋಲ್‌ ವಿಧಿಸಬಾರದು ಎಂದು ಷಣ್ಮುಖಪ್ಪ ಒತ್ತಾಯಿಸಿದರು.



Join Whatsapp