ಭಾರತವನ್ನು ನೋಡಿ, ಅದೆಷ್ಟು ಕೊಳಕು : ಡೊನಾಲ್ಡ್ ಟ್ರಂಪ್

Prasthutha|

ಭಾರತ, ಚೀನಾ ಮತ್ತು ರಶ್ಯಾಗಳು ಕೊಳಕು ಗಾಳಿಯನ್ನು ಹೊಂದಿರುವ ರಾಷ್ಟ್ರಗಳೆಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತನ್ನ ಭಾಷಣದಲ್ಲಿ ಉಲ್ಲೇಖಿಸಿದ್ದಾರೆ. ಅಧ್ಯಕ್ಷೀಯ ಚರ್ಚೆಯ ವೇಳೆ  ಪ್ಯಾರಿಸ್ ಒಪ್ಪಂದವನ್ನು ರದ್ದುಗೊಳಿಸಿದ ತನ್ನ ನಿರ್ಣಯವನ್ನು ಸಮರ್ಥಿಸುವುದಕ್ಕಾಗಿ ಮತ್ತು ಹವಾಮಾನ ಬದಲಾವಣೆಯನ್ನು ನಿಯಂತ್ರಿಸುವ ಕುರಿತು ಜೋ ಬೈಡನ್ ರ ಯೋಜನೆಯನ್ನು ನಿರಾಕರಿಸುವ ಭರದಲ್ಲಿ ಟ್ರಂಪ್ ಹೀಗೆ ಹೇಳಿದ್ದಾರೆ.

- Advertisement -

“ಚೀನಾವನ್ನು ನೋಡಿ.  ಅದೆಷ್ಟು ಕೊಳಕಾಗಿದೆ. ರಶ್ಯಾವನ್ನು ನೋಡಿ. ಅದೆಷ್ಟು ಕೊಳಕಾಗಿದೆ. ಭಾರತವನ್ನು ನೋಡಿ. ಅಲ್ಲಿನ ಗಾಳಿ ಕೊಳಕಾಗಿದೆ. ನಾವು ಟ್ರಿಲಿಯನ್ ಗಟ್ಟಲೆ ಹಣವನ್ನು ಹೊರತೆಗೆಯಬೇಕಾದ ಕಾರಣ ಮತ್ತು ನಮ್ಮನ್ನು ಅತ್ಯಂತ ಅನ್ಯಾಯವಾಗಿ ನಡೆದುಕೊಳ್ಳಲಾದ ಕಾರಣ ನಾವು ಪ್ಯಾರಿಸ್ ಒಪ್ಪಂದದಿಂದ ಹೊರನಡೆದೆವು” ನವೆಂಬರ್ 3 ರಂದು ನಡೆಯಲಿರುವ ಅಮೆರಿಕಾ ಚುನಾವಣೆಗೆ ಮುಂಚಿನ, ದ್ವಿತೀಯ ಹಾಗೂ ಅಂತಿಮ ಚರ್ಚೆಯ ವೇಳೆ ಅವರು ಹೇಳಿದರು.

“ಪ್ಯಾರಿಸ್ ಒಪ್ಪಂದಕ್ಕಾಗಿ ನಾನು ಮಿಲಿಯನ್ ಗಟ್ಟಲೆ ಉದ್ಯೋಗ… ಸಾವಿರಾರು ಕಂಪೆನಿಗಳನ್ನು ಕಳೆದುಕೊಳ್ಳಲಾರೆ. ಅದು ಅನ್ಯಾಯ” ಎಂದು ಅವರು ದೂರದರ್ಶನ ಚರ್ಚೆಯ ವೇಳೆ ನುಡಿದರು.

- Advertisement -

ಅಮೆರಿಕಾ-ಭಾರತ ಸಂಬಂಧವನ್ನು ಹೆಚ್ಚಿಸುವುದಕ್ಕಾಗಿ ಅಮೆರಿಕಾದ ರಾಜ್ಯ ಕಾರ್ಯದರ್ಶಿ ಮೈಕ್ ಪಾಂಪಿಯ್ ಮತ್ತು ರಕ್ಷಣಾ ಕಾರ್ಯದರ್ಶಿ ಮಾರ್ಕ್ ಎಸ್ಪರ್ ಹೊಸದಿಲ್ಲಿಗೆ ಭೇಟಿ ನೀಡುವ ಕೆಲವೇ ದಿನ ಮುಂಚೆ ಟ್ರಂಪ್ ರ ಈ ಹೇಳಿಕೆ ಹೊರಬಿದ್ದಿದೆ.

Join Whatsapp