ಬಾಲಾಪರಾಧಿಗಳಿಗೆ ಮರಣದಂಡನೆ ಇಲ್ಲವೆಂದು ಪುನರುಚ್ಛರಿಸಿದ ಸೌದಿ ಮಾನವ ಹಕ್ಕು ಆಯೋಗ

Prasthutha|

ರಿಯಾದ್: ಸೌದಿ ಅರೇಬಿಯಾದಲ್ಲಿ ಬಾಲಾಪರಾಧಿಗಳಿಗೆ ಮರಣದಂಡನೆಯನ್ನು ವಿಧಿಸಲಾಗುವುದಿಲ್ಲ ಎಂದು ಸೌದಿ ಅರೇಯಾದ ಮಾನವ ಹಕ್ಕುಗಳ ಸಂಘಟನೆ ಇಂದು ಸ್ಪಷ್ಟಪಡಿಸಿದೆ.  ಸರಕಾರೇತರ ಸಂಘಟನೆ (ಎನ್.ಜಿ.ಒ) ಹ್ಯೂಮನ್ ರೈಟ್ಸ್ ವಾಚ್ ನ ಗೊಂದಲಮಯ ಮತ್ತು ಅಸಮರ್ಪಕ ಪ್ರತಿಪಾದನೆಗೆ ಪ್ರತಿಕ್ರಿಯೆಯಾಗಿ ಈ ಪ್ರಕಟಣೆಯನ್ನು ನೀಡಲಾಗಿದೆ ಎಂದು ಸೌದಿ ಎಚ್.ಆರ್.ಸಿ ತಿಳಿಸಿದೆ.

- Advertisement -

ಎಲ್ಲಾ ಪ್ರಕರಣಗಳಲ್ಲೂ ವ್ಯಕ್ತಿಗಳು ಅಪ್ರಾಪ್ತರಾಗಿರುವಾಗ ಮಾಡಿದ ಅಪರಾಧಗಳು ಸಾಬೀತಾದರೆ ಮರಣದಂಡನೆಯನ್ನು ವಿಧಿಸಲಾಗುವುದಿಲ್ಲ ಎಂದು ಎಪ್ರಿಲ್ ತಿಂಗಳಲ್ಲಿ ಪ್ರಕಟಿಸಲಾಗಿದ್ದು, ತಕ್ಷಣವೇ ಅದನ್ನು ಜಾರಿಗೆ ತರಲಾಗಿದೆ ಎಂದು ಅದು ಹೇಳಿದೆ.

ಸೌದಿ ಪ್ರಾಸಿಕ್ಯೂಟರ್ ಗಳು ಬಾಲಾಪರಾಧಿಗಳಿಗೆ ಮರಣದಂಡನೆ ನೀಡುವುದನ್ನು ಇನ್ನೂ ಮುಂದುವರಿಸಿದ್ದಾರೆ ಎಂಬ ಹ್ಯೂಮನ್ ರೈಟ್ಸ್ ವಾಚ್ ನ ಪ್ರತಿಪಾದನೆ ಆಧಾರ ರಹಿತ ಎಂದು ಎಚ್.ಆರ್.ಸಿ ಹೇಳಿದೆ.

- Advertisement -

ಭಿನ್ನ ಪ್ರಕೃತಿಯ ಪ್ರಕರಣಗಳನ್ನು ಹ್ಯೂಮನ್ ರೈಟ್ಸ್ ವಾಚ್ ಸಂಯೋಜಿಸಿರುವಂತೆ ಭಾಸವಾಗುತ್ತದೆ. ಕೆಲವೊಂದು ಉಲ್ಲೇಖಿತ ವ್ಯಕ್ತಿಗಳು ತಾವು ಆ ಅಪರಾಧ ಎಸಗುವಾಗ ಅಪ್ರಾಪ್ತರಾಗಿದ್ದು, ಅದಕ್ಕಾಗಿ ಅವರನ್ನು ಶಿಕ್ಷಿಸಲಾಗುತ್ತದೆ ಎಂದು ಹ್ಯೂಮನ್ ರೈಟ್ಸ್ ವಾಚ್ ಹೇಳಿದೆ.

ಇಂತಹ ವ್ಯಕ್ತಿಗಳ ವಿರುದ್ಧ  ಬಾಲಾಪರಾಧ ಕಾನೂನಿನಡಿ ಆರೋಪ ದಾಖಲಿಸಲಾಗುತ್ತದೆ ಮತ್ತು ಪ್ರಾಸಿಕ್ಯೂಶನ್ ಅವರಿಗೆ ಮರಣ ದಂಡನೆಯ ಶಿಕ್ಷೆಗೆ ಕೋರಿಕೆಯನ್ನು ಸಲ್ಲಿಸುವುದಿಲ್ಲವೆಂಬುದನ್ನು ತಾನು ಖಾತರಿಪಡಿಸಿಕೊಳ್ಳುವುದಾಗಿ ಎಚ್.ಆರ್.ಸಿ ತಿಳಿಸಿದೆ.

ಹ್ಯೂಮನ್ ರೈಟ್ಸ್ ವಾಚ್ ಉಲ್ಲೇಖಿಸಿದ ಕೆಲವು ವ್ಯಕ್ತಿಗಳು ತಾವು ಅಪರಾಧವನ್ನು ಎಸಗುವಾಗ 18 ವಯಸ್ಸು ಮೀರಿದ್ದ ಕಾರಣ ಅವರನ್ನು ಸೌದಿ ಅರೇಬಿಯಾದ ಬಾಲಾಪರಾಧ ಕಾನೂನಿನಡಿ ತರುವುದು ಸಾಧ್ಯವಿಲ್ಲ ಎಂದು ಎಚ್.ಆರ್.ಸಿ ಹೇಳಿದೆ.

ಯಾವುದೇ ಬಾಲಾಪರಾಧಿಗೆ ಗರಿಷ್ಠ ಶಿಕ್ಷೆಯಾಗಿ ಬಾಲಾಪರಾಧಿ ಪುನಶ್ಚೇತನಾ ವ್ಯವಸ್ಥೆಯಲ್ಲಿ 10 ವರ್ಷಗಳ ಬಂಧನ ವಿಧಿಸಲಾಗುತ್ತದೆ ಎಂದು ಎಚ್.ಆರ್.ಸಿ ಹೇಳಿದೆ.

Join Whatsapp