ಲಂಚ ಸ್ವೀಕರಿಸುತ್ತಿದ್ದ ಕಂದಾಯ ನಿರೀಕ್ಷಕ ಲೋಕಾಯುಕ್ತ ಬಲೆಗೆ

Prasthutha|

ಬೆಂಗಳೂರು : ಲಂಚ ಸ್ವೀಕರಿಸುತ್ತಿದ್ದ ದಾಸನಪುರದ ಕಂದಾಯ ನಿರೀಕ್ಷಕ ಮತ್ತು ಮತ್ತು ಆತನ ಆಪ್ತನನ್ನು ಲೋಕಾಯುಕ್ತ ಅಧಿಕಾರಿಗಳು ಬಂಧಿಸಿದ್ದಾರೆ.

- Advertisement -

ಕಂದಾಯ ನಿರೀಕ್ಷಕ ವಸಂತ್ ಅವರು ಬೆಟ್ಟಸ್ವಾಮಿ ಗೌಡ ಎಂಬುವವರಿಗೆ ಖಾತೆ ಪೋಡಿ ಮಾಡಿ ಕೊಡಲು 28 ಲಕ್ಷ ರೂ ಹಣಕ್ಕೆ ಬೇಡಿಕೆಯಿಟ್ಟಿದ್ದ. ಇದರಲ್ಲಿ ಮೊದಲೇ ಚೆಕ್ ರೂಪದಲ್ಲಿ 4 ಲಕ್ಷ ರೂ. ಹಣವನ್ನು ಪಡೆದಿದ್ದ. ಬಳಿಕ ಬುಧವಾರ ಖಾಸಗಿ ಹೋಟೆಲ್ನಲ್ಲಿ 3.5 ಲಕ್ಷ ರೂ. ಪಡೆಯುತ್ತಿದ್ದಾಗ ಟ್ರ್ಯಾಪ್ ಕಾರ್ಯಾಚರಣೆ ಕೈಗೊಂಡ ಲೋಕಾಯುಕ್ತ ಅಧಿಕಾರಿಗಳು ವಸಂತ್ ಹಾಗೂ ಆತನ ಆಪ್ತನನ್ನು ರೆಡ್ಹ್ಯಾಂಡ್ ಆಗಿ ಬಂಧಿಸಿದ್ದಾರೆ.


ಬಂಧಿತ ಕಂದಾಯ ನಿರೀಕ್ಷಕನನ್ನು ವಸಂತ್ ಎಂದು ಗುರುತಿಸಲಾಗಿದೆ. ವಸಂತ್ 3.5 ಲಕ್ಷ ರೂ. ನಗದು ಹಾಗೂ 4 ಲಕ್ಷ ಚೆಕ್ ರೂಪದಲ್ಲಿ ಪಡೆದಿದ್ದ ಎಂದು ತಿಳಿದುಬಂದಿದೆ.



Join Whatsapp