ನವದೆಹಲಿ: ಲೋಕಸಭೆಯಲ್ಲಿ ಕ್ರಿಮಿನಲ್ ಗುರುತಿಸುವಿಕೆ ಮಸೂದೆ ಅಂಗೀಕಾರ

Prasthutha|

ನವದೆಹಲಿ: ಲೋಕಸಭೆಯಲ್ಲಿ ಕ್ರಿಮಿನಲ್ ಪ್ರೊಸಿಜರ್ (ಗುರುತಿಸುವಿಕೆ) ಮಸೂದೆಯನ್ನು ಧ್ವನಿ ಮತದಾನದ ಮೂಲಕ ಅಂಗೀಕರಿಸಲಾಯಿತು.

- Advertisement -

ನೂತನ ಮಸೂದೆಯ ಅನ್ವಯ ಭಾರತದಾದ್ಯಂತ ಪೊಲೀಸರು ಮತ್ತು ಜೈಲು ಅಧಿಕಾರಿಗಳಿಗೆ ಬಂಧಿತ ಅಥವಾ ಶಿಕ್ಷೆಗೊಳಗಾದ ಕೈದಿಗಳ ದೈಹಿಕ ಮತ್ತು ಜೈವಿಕ ಮಾದರಿಗಳಾದ ಐರಿಸ್, ರೆಟಿನಾ ಸ್ಕ್ಯಾನ್, ಸಹಿ, ಕೈ ಬರಹಗಳ ಸಂಗ್ರಹ, ಶೇಖರಣೆ ಮತ್ತು ವಿಶ್ಲೇಷಿಸಲು ಅನು ಮಾಡಿಕೊಡುತ್ತದೆ.

ಈ ಮಸೂದೆಯು 1920ರ ಕೈದಿಗಳ ಗುರುತಿನ ಕಾಯ್ದೆಯನ್ನು ರದ್ದುಪಡಿಸಲು ಪ್ರಯತ್ನಿಸುತ್ತಿದ್ದು, ಇದರ ವ್ಯಾಪ್ತಿಯು ಸೀಮಿತ ವರ್ಗದ ಅಪರಾಧಿ ಮತ್ತು ಅಪರಾಧಿಗಳಲ್ಲದ ವ್ಯಕ್ತಿಗಳ ಬೆರಳಚ್ಚು, ಪಾದದ ಗುರುತು ಮತ್ತು ಮ್ಯಾಜಿಸ್ಟ್ರೇಟ್ ಆದೇಶದ ಮೇರೆಗೆ ಛಾಯಾಚಿತ್ರಗಳನ್ನು ತೆಗೆದುಕೊಳ್ಳಲು ಅವಕಾಶ ನೀಡುತ್ತದೆ.

- Advertisement -

ದೇಶದ ಕಾನೂನು, ಸುವ್ಯವಸ್ಥೆ ಮತ್ತು ಆಂತರಿಕ ಭದ್ರತೆಯನ್ನು ಬಲಪಡಿಸುವುದು ಮಸೂದೆಯನ್ನು ಜಾರಿಗೆ ತರವುದು ಕೇಂದ್ರ ಸರ್ಕಾರದ ಉದ್ದೇಶವಾಗಿದೆ. ಕರಡು ಪ್ರತಿಯಲ್ಲಿ ಮಾನವ ಮತ್ತು ವೈಯಕ್ತಿಕ ಹಕ್ಕುಗಳ ಬಗ್ಗೆ ಕಾಳಜಿ ವಹಿಸಲಾಗಿದೆ ಎಂದು ಅಮಿತ್ ಶಾ ತಿಳಿಸಿದ್ದಾರೆ.

ಈ ಮಧ್ಯೆ ಪ್ರತಿಪಕ್ಷ ಸದಸ್ಯರು ಈ ಮಸೂದೆ ಕರಾಳವಾಗಿದೆ ಎಂದು ಬಣ್ಣಿಸಿದೆ.

ಮಸೂದೆಯ ದುರುಪಯೋಗವನ್ನು ತಡೆಯುವಂತಾಗಲು ಸಂಸತ್ತಿನ ಸ್ಥಾಯಿ ಸಮಿತಿಗೆ ಈ ಮಸೂದೆಯನ್ನು ರವಾನಿಸುವಂತೆ ಉಲ್ಲೇಖಿಸಿದ ಕೆಲವು ವಿರೋಧ ಪಕ್ಷದ ಸದಸ್ಯರು, ಇದರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವಂತೆ ಒತ್ತಾಯಿಸಿದ್ದಾರೆ.

ಈ ಮಧ್ಯೆ ಕಾಂಗ್ರೆಸ್ ಸದಸ್ಯ ಮನೀಶ್ ತಿವಾರಿ, ಕರಡು ಶಾಸನವು ಕರಾಳ ಮತ್ತು ನಾಗರಿಕ ಸ್ವಾತಂತ್ರ್ಯಗಳ ವಿರುದ್ಧವಾಗಿದ್ದು, ಸಂವಿಧಾನದ 14, 19 ಮತ್ತು 21 ನೇ ವಿಧಿಯ ಮಾನವ ಹಕ್ಕುಗಳು ಮತ್ತು ನಾಗರಿಕ ಸ್ವಾತಂತ್ರ್ಯಗಳೊಂದಿಗೆ ವ್ಯವಹರಿಸುವ ಮನೋಭಾವಕ್ಕೆ ವಿರುದ್ಧವಾಗಿದೆ ಎಂದು ತಿಳಿಸಿದ್ದಾರೆ.

ಡಿಎಂಕೆ ನಾಯಕ ದಯಾನಾಧಿ ಮಾರನ್ ಅವರು ಪ್ರತಿಕ್ರಿಯಿಸಿ, ಈ ಮಸೂದೆಯು ಜನವಿರೋಧಿ ಮತ್ತು ಒಕ್ಕೂಟದ ಮನೋಭಾವಕ್ಕೆ ವಿರುದ್ಧವಾಗಿದೆ ಎಂದು ಆರೋಪಿಸಿದ್ದಾರೆ.

ಇಂತಹ ಕಾನೂನನ್ನು ತರುವ ಮೂಲಕ ಸರ್ಕಾರವು ಕಣ್ಗಾವಲು ರಾಷ್ಟ್ರವನ್ನು ಸ್ಥಾಪಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ ಮಾರನ್, “ಇದು ವ್ಯಕ್ತಿಗಳ ಖಾಸಗಿತನವನ್ನು ಮುಕ್ತವಾಗಿ ಉಲ್ಲಂಘಿಸುತ್ತದೆ” ಎಂದು ತಿಳಿಸಿದ್ದಾರೆ.



Join Whatsapp