ಕುವೈತ್ ಸಿಟಿ : ಕೊರೊನ ವೈರಸ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಕುವೈತ್ ಸರಕಾರ ವಿದೇಶಿ ನಾಗರಿಕರಿಗೆ ಎರಡು ವಾರಗಳ ಪ್ರವೇಶ ನಿರ್ಬಂಧ ಹೇರಿದೆ. ಭಾನುವಾರದಿಂದ ಈ ನಿರ್ಬಂಧ ಆದೇಶ ಅನ್ವಯವಾಗಲಿದೆ.
ರಾತ್ರಿ 8 ಗಂಟೆಯಿಂದ ಬೆಳಗ್ಗೆ 5 ಗಂಟೆ ವರೆಗೆ ವಾಣಿಜ್ಯ ಚಟುವಟಿಕೆಗಳಿಗೂ ನಿಯಂತ್ರಣ ಹೇರಲಾಗಿದೆ. ವೈದ್ಯಕೀಯ ಸಂಬಂಧಿ ಚಟುವಟಿಕೆಗಳು, ಮೆಡಿಕಲ್ ಗಳು ಮತ್ತು ದಿನಸಿ ಅಂಗಡಿಗಳಿಗೆ ಇದರಿಂದ ವಿನಾಯ್ತಿ ಇದೆ.
ಸಾರ್ವಜನಿಕ ಸಮಾರಂಭಗಳನ್ನು ನಿಷೇಧಿಸಲು ನಿರ್ಧರಿಸಲಾಗಿದೆ. ಜಿಮ್ ಕೇಂದ್ರಗಳು, ಸೆಲೂನ್ ಗಳು ಮತ್ತು ಕ್ರೀಡಾ ಕೂಟಗಳಿಗೂ ನಿಷೇಧ ಹೇರಲಾಗಿದೆ.