ಸೌದಿ ಅರೇಬಿಯಾದಲ್ಲಿ 10 ದಿನ ಸಂಪೂರ್ಣ ಲಾಕ್ ಡೌನ್ : ಮದುವೆ, ಮನೋರಂಜನೆ ಕಾರ್ಯಕ್ರಮಗಳೂ ರದ್ದು

Prasthutha|

ರಿಯಾಧ್ : ಕೊರೊನ ವೈರಸ್ ಸಾಂಕ್ರಾಮಿಕ ಸೋಂಕಿನ ಹಿನ್ನೆಲೆಯಲ್ಲಿ, ಸೌದಿ ಅರೇಬಿಯಾದಲ್ಲಿ ಮುಂದಿನ 10 ದಿನಗಳ ಕಾಲ ಎಲ್ಲಾ ಮನೋರಂಜನೆ ಕಾರ್ಯಕ್ರಮಗಳನ್ನು ರದ್ದುಪಡಿಸಲಾಗಿದೆ. ಈ ಬಗ್ಗೆ ಸೌದಿ ಅರೇಬಿಯಾ ಗೃಹ ಸಚಿವಾಲಯದ ಅಧಿಕೃತ ಮೂಲಗಳನ್ನು ಆಧರಿಸಿ ಸೌದಿ ಪ್ರೆಸ್ ಏಜೆನ್ಸಿ ವರದಿ ಮಾಡಿದೆ.

- Advertisement -

ಗುರುವಾರ ರಾತ್ರಿ 10 ಗಂಟೆಯಿಂದ ಎಲ್ಲಾ ಹೊಸ ನಿಯಮಗಳು ಜಾರಿಗೊಳ್ಳಲಿವೆ. 10 ದಿನಗಳ ವರೆಗೆ ರೆಸ್ಟೋರೆಂಟ್ ಗಳು ಮತ್ತು ಕೆಫೆಗಳಲ್ಲಿ ಯಾವುದೇ ಔತಣಕೂಟಗಳನ್ನು, ಊಟಗಳನ್ನು ರದ್ದು ಪಡಿಸಲಾಗಿದೆ. ರೆಸ್ಟೋರೆಂಟ್ ಮತ್ತು ಕೆಫೆಗಳಿಂದ ಊಟವನ್ನು ಪಾರ್ಸೆಲ್ ತೆಗೆದುಕೊಂಡು ಹೋಗಬಹುದು.

ವೈರಸ್ ಹರಡುವಿಕೆಯನ್ನು ತಡೆಯುವ ಉದ್ದೇಶದಿಂದ ಸಿನೆಮಾ ಮತ್ತು ಒಳಾಂಗಣ ಮನೋರಂಜನಾ ಕೇಂದ್ರಗಳಂತಹ ಸ್ಥಳಗಳನ್ನು ಮುಚ್ಚಲಾಗಿದೆ. ಜಿಮ್ ಮತ್ತು ಕ್ರೀಡಾ ಕೇಂದ್ರಗಳನ್ನೂ ಮುಚ್ಚಲು ಆದೇಶಿಸಲಾಗಿದೆ.

- Advertisement -

30 ದಿನಗಳ ಅವಧಿಗೆ ಹೋಟೆಲ್ ಅಥವಾ ಖಾಸಗಿ ಸ್ಥಳಗಳಲ್ಲಿ ಆಯೋಜಿಸಲಾಗಿರುವ ಮದುವೆಗಳು, ಕಾರ್ಪೊರೇಟ್ ಮೀಟಿಂಗ್ ಗಳು ಸೇರಿದಂತೆ ಎಲ್ಲಾ ಚಟುವಟಿಕೆಗಳನ್ನು ಅಮಾತುಗೊಳಿಸಲಾಗಿದೆ. ನಿಯಮಗಳನ್ನು ಉಲ್ಲಂಘಿಸುವವರಿಗೆ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ವರದಿಯಾಗಿದೆ.  

Join Whatsapp