ಸುಳ್ಯ : ಕೋವಿಡ್ ಸೋಂಕಿತನ ಅಂತ್ಯಕ್ರಿಯೆಗೆ ಸ್ಥಳೀಯರಿಂದ ತಡೆ!

Prasthutha|

►ಕೊಡಿಯಾಲಬೈಲು ವಿಮುಕ್ತಿಧಾಮಕ್ಕೆ ಸ್ಥಳಾಂತರಿಸಿ ಅಂತ್ಯಸಂಸ್ಕಾರ!

- Advertisement -

ಸುಳ್ಯ : ಕೋವಿಡ್ ಸೋಂಕಿನಿಂದ ಮೃತಪಟ್ಟ ಬೆಳ್ಳಾರೆಯ ತಡಗಜೆಯ ನಿವಾಸಿಯೊಬ್ಬರ ಅಂತ್ಯಕ್ರಿಯೆ ಗೌರಿಹೊಳೆಯ ರುದ್ರಭೂಮಿಯಲ್ಲಿ ನಡೆಸಲು ಗೌರಿಹೊಳೆ ನಿವಾಸಿಗಳು ವಿರೋಧಿಸಿದ ಹಿನ್ನೆಲೆಯಲ್ಲಿ ಸುಳ್ಯದ ಕೊಡಿಯಾಲಬೈಲು ಹಿಂದು ರುದ್ರಭೂಮಿ ವಿಮುಕ್ತಿಧಾಮಕ್ಕೆ ಶವವನ್ನು ಸ್ಥಳಾಂತರಿಸಿ ಅಂತ್ಯ ಸಂಸ್ಕಾರ ನಡೆಸಿದ ಘಟನೆ ವರದಿಯಾಗಿದೆ.

ಕೊರೋನಾದಿಂದ ಬಳಲುತ್ತಿದ್ದ ಬೆಳ್ಳಾರೆ ತಡಗಜೆಯ ವ್ಯಕ್ತಿಯೋರ್ವರು ನಿನ್ನೆ ಮುಂಜಾನೆ ನಿಧನರಾಗಿದ್ದು, ಇವರ ಅಂತ್ಯಸಂಸ್ಕಾರವನ್ನು ಬೆಳ್ಳಾರೆ ಗೌರಿಯಲ್ಲಿರುವ ರುದ್ರಭೂಮಿಯಲ್ಲಿ ನೆರವೇರಿಸಲು ಗ್ರಾಮ ಪಂಚಾಯತ್‌ ಆಡಳಿತ ಮಂಡಳಿ ನಿರ್ಧರಿಸಿ ಗೌರಿಹೊಳೆಗೆ ಬಂದು ಸಿದ್ಧತೆ ಮಾಡಿದ್ದರು.

- Advertisement -

ಕೊರೋನ ರೋಗಿಯ ಮೃತದೇಹವನ್ನು ಇಲ್ಲಿಯ ಸ್ಮಶಾನಕ್ಕೆ ತರುತ್ತಾರೆಂಬ ಮಾಹಿತಿ ದೊರೆತ ತಕ್ಷಣ ಸ್ಥಳೀಯ ನಿವಾಸಿಗಳು ಸೇರಿ, ಮೃತದೇಹವನ್ನು ಇಲ್ಲಿ ಅಂತ್ಯಸಂಸ್ಕಾರ ಮಾಡಬಾರದು. ಇಲ್ಲಿ ಸರಿಯಾದ ವ್ಯವಸ್ಥೆಗಳಿಲ್ಲ. ರುದ್ರಭೂಮಿ ಅಭಿವೃದ್ಧಿಯಾಗಿಲ್ಲ, ವ್ಯವಸ್ಥಿತವಾದ ಕಟ್ಟಡಗಳಿಲ್ಲ. ಆದುದರಿಂದ ಇಲ್ಲಿ ಅಂತ್ಯಸಂಸ್ಕಾರ ಮಾಡಬಾರದೆಂದು ವಿರೋಧ ವ್ಯಕ್ತಪಡಿಸಿದ್ದಾರೆ.

ಬೆಳ್ಳಾರೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಮನವೊಲಿಸಲು ಪ್ರಯತ್ನ ಮಾಡಿದರೂ ಫಲ ನೀಡಲಿಲ್ಲ ಕೊನೆಗೆ ಮೃತ ವ್ಯಕ್ತಿಯ ಮನೆಯವರು ಮೃತದೇಹದ ಹೆಸರಿನಲ್ಲಿ ಗಲಾಟೆ ಮಾಡಬೇಡಿ,ಅಂತ್ಯ ಸಂಸ್ಕಾರ ಬೇರೆ ಕಡೆ ಮಾಡಿಸಿ ಎಂದು ವಿನಂತಿಸಿದ್ದಾರೆ. ನಂತರದಲ್ಲಿ ಮೃತ ದೇಹವನ್ನು ಸುಳ್ಯ ಬಳಿಯ ಉಬರಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಡಿಯಾಲಬೈಲು ಹಿಂದೂ ರುದ್ರ ಭೂಮಿಗೆ ಕೊಂಡೊಯ್ದು ಅಲ್ಲಿ ಅಂತ್ಯ ಸಂಸ್ಕಾರ ಮಾಡಲಾಗಿದೆ ಎಂದು ತಿಳಿದು ಬಂದಿದೆ.

Join Whatsapp