‘ಚಿಕ್ಕ ಹುಡುಗನ’ ಟಾರ್ಗೆಟ್‌ ಮಾಡಿ ಬೇಟೆಯಾಡಲಾಗುತ್ತಿದೆ: ಉದಯನಿಧಿ ಪರ ಕಮಲ್‌ ಹಾಸನ್

Prasthutha|

ಚೆನ್ನೈ: ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಸನಾತನ ಧರ್ಮದ ಬಗ್ಗೆ ಮಾತನಾಡಿದ ಕಾರಣಕ್ಕೆ ಈ ಚಿಕ್ಕ ಹುಡುಗನನ್ನು (ಉದಯನಿಧಿ) ಬೇಟೆಯಾಡಲಾಗುತ್ತಿದೆ ಎಂದು ನಟ, ರಾಜಕಾರಣಿ ಕಮಲ್ ಹಾಸನ್ ಹೇಳಿದ್ದಾರೆ.

- Advertisement -


ಕೊಯಮತ್ತೂರಿನಲ್ಲಿ ನಡೆದ ಪಕ್ಷದ ಸಭೆಯಲ್ಲಿ ಮಾತನಾಡಿದ ಕಮಲ್‌ ಹಾಸನ್‌, ಸನಾತನ ಧರ್ಮದ ಬಗ್ಗೆ ಮಾತನಾಡಿದ್ದಕ್ಕೆ ಚಿಕ್ಕ ಹುಡುಗನನ್ನ ಟಾರ್ಗೆಟ್‌ ಮಾಡಲಾಗಿದೆ ಎಂದು ಹೇಳಿದ್ದಾರೆ. ಇಲ್ಲಿ ಉದಯನಿಧಿ ಸ್ಟಾಲಿನ್‌, ಬಿಜೆಪಿ ಅಥವಾ ಇನ್ನಾವುದೇ ಸಂಘಟನೆಯನ್ನು ಹೆಸರಿಸದೆ ಪರೋಕ್ಷವಾಗಿ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್‌ ಅವರ ಪುತ್ರನ ಬೆಂಬಲಕ್ಕೆ ಕಮಲ್‌ ಹಾಸನ್‌ ನಿಂತಿದ್ದಾರೆ.

Join Whatsapp