ಕಾವೇರಿ ಹೋರಾಟ: ಬಾಯಿಗೆ ಮಣ್ಣು ಹಾಕಿ ಬಿಜೆಪಿ ಕಾರ್ಯಕರ್ತನಿಂದ ಪ್ರತಿಭಟನೆ

Prasthutha|

ಮಂಡ್ಯ: ತಮಿಳುನಾಡಿಗೆ ಕಾವೇರಿ ನೀರು ಹರಿಸದಂತೆ ಆಗ್ರಹಿಸಿ ಮಂಡ್ಯದಲ್ಲಿ ಆರಂಭಿಸಿರುವ ರೈತರ ಹೋರಾಟದ ಕಿಚ್ಚು ಕಟ್ಟೆಯೊಡೆದಿದೆ.

- Advertisement -


ಈ ನಡುವೆ ಬಿಜೆಪಿ ಕಾರ್ಯಕರ್ತರೊಬ್ಬರು ಮಣ್ಣು ಬಾಯಿಗೆ ಹಾಕಿ ಮಂಡ್ಯದಲ್ಲಿ ಪ್ರತಿಭಟನೆ ನಡೆಸಿದರು. ʼʼರೈತರ ಬಾಯಿಗೆ ಮಣ್ಣು ಹಾಕಿದರಲ್ಲಪ್ಪೋ ಸರಕಾರʼʼ ಎಂದು ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿ ಕಾರ್ಯಕರ್ತರು ಷೋಷಣೆ ಕೂಗಿದರು.


ಕರ್ನಾಟಕ ಸರ್ಕಾರ ತಮಿಳುನಾಡಿಗೆ ನೀರುಬಿಟ್ಟು ರೈತರ ಬಾಯಿಗೆ ಮಣ್ಣುಹಾಕಿದೆ ಎಂದು ಹೇಳಿ ತಾವೇ ಬಾಯಿಗೆ ಮಣ್ಣು ಹಾಕಿಕೊಂಡು ಅಸಮಾಧಾನ ಹೊರಹಾಕಿದ್ದಾರೆ.