ಹಿಂದಿ ಹೇರಿಕೆಯಂತೆ, ಹಿಂದುತ್ವ ಹೇರಿಕೆಯನ್ನು ಕೂಡ ಒಪ್ಪಲು ಸಾಧ್ಯ ಇಲ್ಲ ಎಂದ ಚೇತನ್ ಅಹಿಂಸಾ

Prasthutha|

ಬೆಂಗಳೂರು: ಹಿಂದಿ ಹೇರಿಕೆಯಂತೆ ಹಿಂದುತ್ವ ಹೇರಿಕೆಯನ್ನು ಕೂಡ ಒಪ್ಪಲು ಸಾಧ್ಯವೇ ಇಲ್ಲ. ಧರ್ಮ, ಜಾತಿಗಳಲ್ಲಿ ವಿವಿಧತೆ ಇದೆ. ಹಿಂದೂ ಬೇರೆ, ಹಿಂದುತ್ವ ಬೇರೆ. ಭೂತ ಕೋಲ ಮೂಲ ನಿವಾಸಿಗಳ ಆಚರಣೆ. ಕೇವಲ ಹಿಂದು ಧರ್ಮದ್ದಲ್ಲ ಎಂದು ನಟ ಚೇತನ್ ತನ್ನ ಹೇಳಿಕೆಯನ್ನು ಸಮರ್ಥಿಸಿದ್ದಾರೆ.

- Advertisement -


ಕಾಂತಾರ ಸಿನಿಮಾ ವಿವಾದಕ್ಕೆ ಸ್ಪಷ್ಟನೆ ನೀಡಿದ ಅವರು ಮೂಲವಾಸಿಗಳು, ಬಹು ಜನರು, ದ್ರಾವಿಡರು ಎಲ್ಲವೂ ಮಿಶ್ರಣ ಆಗಿ 3,500 ವರ್ಷಗಳಿಂದ ವೈದಿಕ ಪರಂಪರೆ ಅನ್ನೋದು ಬಂದಿದೆ. ವೈದಿಕ ಪರಂಪರೆಯಲ್ಲಿ ಅದರದ್ದೇ ಆದ ವಿಶೇಷತೆ ಇದೆ. ವೈದಿಕ, ಹಿಂದೂ ಧರ್ಮ ಎಲ್ಲವನ್ನೂ ಆಚರಿಸಲು ಸಾಂವಿಧಾನಿಕ ಹಕ್ಕು ಇದೆ. ಆದರೆ ಪ್ರತಿಯೊಂದನ್ನು ಹಿಂದು ಧರ್ಮದ್ದು ಎನ್ನಲು ಸಾಧ್ಯವಿಲ್ಲ.ನಾವು ಅವೈದಿಕ ಪರಂಪರೆಯನ್ನು ಅರ್ಥ ಮಾಡಿಕೊಳ್ಳಬೇಕು. ವೈದಿಕತೆ ಬರೋ ಮುಂಚಿನ ಮೂಲ ನಿವಾಸಿ ಪರಂಪರೆಯನ್ನು ಅರ್ಥ ಮಾಡಿಕೊಳ್ಳಬೇಕು. ಅದಕ್ಕೂ ಹಿಂದೂ ಧರ್ಮಕ್ಕೂ ಇರುವ ವ್ಯತ್ಯಾಸವನ್ನು ತಿಳಿದುಕೊಳ್ಳೋದು ಬಹಳ ಮುಖ್ಯ. ಎಲ್ಲ ಆಚರಣೆಗಳನ್ನು ಹಿಂದೂ ಧರ್ಮದ್ದು ಎನ್ನಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

Join Whatsapp