ಪತ್ನಿಯ ಕೊಲೆ ಮಾಡಿದ್ದ ಅಪರಾಧಿಗೆ ಜೀವಾವಧಿ ಶಿಕ್ಷೆl

Prasthutha|

ಹಾಸನ: ಪತ್ನಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದ ಪತಿ ಸಿ.ಟಿ. nಪುಟ್ಟಸ್ವಾಮಿಗೆ ಇಲ್ಲಿನ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಜೀವಾವಧಿ ಜೈಲು ಶಿಕ್ಷೆ ಹಾಗೂ 75 ಸಾವಿರ ರೂ. ದಂಡ hವಿಧಿಸಿ ಆದೇಶ ಮಾಡಿದೆ. ಪುಟ್ಟಸ್ವಾಮಿ ವರದಕ್ಷಿಣೆಗಾಗಿ ಕಿರುಕುಳ ನೀಡಿ ಪತ್ನಿ ಪುಟ್ಟಭಾಗ್ಯಮ್ಮ ಅವರನ್ನು ಕೊಲೆ ಮಾಡಿದ್ದು ಸಾಬೀತಾಗಿದೆ.

- Advertisement -

ಪುಟ್ಟಭಾಗ್ಯಮ್ಮರನ್ನು ಹಾಸನ ತಾಲ್ಲೂಕಿನ ಮೊಸಳೆ ಹೊಸಹಳ್ಳಿ ಗ್ರಾಮದ ಸಿ.ಟಿ. ಪುಟ್ಟಸ್ವಾಮಿಗೆ 2005 ರಲ್ಲಿ ಮದುವೆ ಮಾಡಿಕೊಡಲಾಗಿತ್ತು. ವರದಕ್ಷಿಣೆಯಾಗಿ ಚಿನ್ನಾಭರಣ, ನಗದು ನೀಡಲಾಗಿತ್ತು. 2006 ರ ಜುಲೈನಲ್ಲಿ ಪುಟ್ಟಭಾಗ್ಯ ಅವರಿಗೆ ಗಂಡು ಮಗು ಜನಿಸಿತ್ತು. ಮಗುವಿನೊಂದಿಗೆ ಗಂಡನ ಮನೆಗೆ ಹೋದ ನಂತರ ವರದಕ್ಷಿಣೆ ತರುವಂತೆ ಪತಿ ಪುಟ್ಟಸ್ವಾಮಿ, ಮಾವ ತಿಮ್ಮಾಜೋಗಿ, ಅತ್ತೆ ವೆಂಕಟಮ್ಮ, ಕಿರುಕುಳ ಆರಂಭಿಸಿದ್ದರು.

2007 ರ ಅಕ್ಟೋಬರ್‌ನಲ್ಲಿ ಪುಟ್ಟಭಾಗ್ಯಮ್ಮಗೆ ಎರಡನೇ ಹೆರಿಗೆಯಾದ ನಂತರವೂ ವರದಕ್ಷಿಣೆ ಕಿರುಕುಳ ಮುಂದುವರಿದಿತ್ತು. 2009 ರಲ್ಲಿ ಗ್ರಾಮದ ಹಿರಿಯರನ್ನು ಕೂಡಿಸಿ, ಪಂಚಾಯಿತಿ ಮಾಡಲಾಗಿತ್ತು. ಅಲ್ಲಿ ಹೆಂಡತಿಯೊಂದಿಗೆ ಪ್ರತ್ಯೇಕ ಮನೆ ಮಾಡುವಂತೆ ಪುಟ್ಟಸ್ವಾಮಿಗೆ ಸೂಚನೆ ನೀಡಲಾಗಿತ್ತು.

- Advertisement -

ಅದರಂತೆ ದಂಪತಿ ತಟ್ಟೇಕೆರೆ ಗ್ರಾಮದ ಬಳಿ ಜನತಾ ಕಾಲೊನಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಪುಟ್ಟಭಾಗ್ಯಮ್ಮ ಮೃತಪಟ್ಟಿದ್ದು, ಆಕೆಯನ್ನು ಗಂಡ ಹಾಸನದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾನೆ ಎಂದು 2009 ರ ಸೆಪ್ಟೆಂಬರ್‌ 9 ರಂದು ಅಪರಿಚಿತರು ಕರೆ ಮಾಡಿ, ತವರಿನ ಜನರಿಗೆ ತಿಳಿಸಿದ್ದರು. 2009 ರ ಸೆಪ್ಟೆಂಬರ್ 10 ರಂದು ಹಾಸನದ ಸರ್ಕಾರಿ ಆಸ್ಪತ್ರೆಗೆ ಹೋಗಿ ನೋಡಿದಾಗ, ಮಗಳ ಶವದ ಮೇಲೆ ಮೂಗು, ಬಾಯಿ, ಕಿವಿಯಿಂದ ರಕ್ತ ಬಂದು ಗುರುತುಗಳಿದ್ದವು. ವರದಕ್ಷಿಣೆ ಕಿರುಕುಳ ಹಾಗೂ ಕೊಲೆ ಪ್ರಕರಣ ದಾಖಲಾಗಿತ್ತು.



Join Whatsapp