ಸತತ 4ನೇ ಬಾರಿಗೆ ಬಾಂಗ್ಲಾ ಪ್ರಧಾನಿಯಾದ ಶೇಖ್ ಹಸೀನಾಗೆ ಮೋದಿ ಅಭಿನಂದನೆ

Prasthutha|

ವದೆಹಲಿ : ಸತತ ನಾಲ್ಕನೇ ಬಾರಿಗೆ ಐತಿಹಾಸಿಕ ಗೆಲುವು ಸಾಧಿಸಿದ್ದಕ್ಕಾಗಿ ಬಾಂಗ್ಲಾ ದೇಶದ ಪ್ರಧಾನಿ ಶೇಖ್ ಹಸೀನಾಗೆ ಭಾರತದ ಪ್ರಧಾನಿ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. ಜೊತೆಗೆ ಚುನಾವಣೆಗಳನ್ನು ಯಶಸ್ವಿಯಾಗಿ ನಡೆಸಿದ್ದಕ್ಕಾಗಿ ಬಾಂಗ್ಲಾದೇಶದ ಜನರನ್ನು ಶ್ಲಾಘಿಸಿದ್ದಾರೆ.

- Advertisement -

ಶೇಖ್ ಹಸೀನಾ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಮೋದಿ, ಬಾಂಗ್ಲಾದೇಶದೊಂದಿಗಿನ ನಮ್ಮ ಶಾಶ್ವತ ಮತ್ತು ಜನ ಕೇಂದ್ರಿತ ಪಾಲುದಾರಿಕೆಯನ್ನ ಮತ್ತಷ್ಟು ಬಲಪಡಿಸಲು ನಾವು ಬದ್ಧರಾಗಿದ್ದೇವೆ ಎಂದು ಹೇಳಿದ್ದಾರೆ.

300ಸ್ಥಾನಗಳ ಬಾಂಗ್ಲಾ ದೇಶದ ಸಂಸತ್ತಿನಲ್ಲಿ ಹಸೀನಾ ಅವರ ಅವಾಮಿ ಲೀಗ್ ಪಕ್ಷವು 223 ಸ್ಥಾನಗಳನ್ನು ಗೆದ್ದಿದೆ ಅಗಾಧ ಬಹುಮತದಿಂದ ದಾಖಲೆಯ ನಾಲ್ಕನೇ ಅವಧಿಗೆ ಶೇಖ್ ಹಸೀನಾ ಪ್ರಧಾನಿಯಾಗಿ ಪಟ್ಟ ಅಲಂಕರಿಸಲಿದ್ದಾರೆ.

- Advertisement -

Join Whatsapp