ಬದಲಾವಣೆಗಾಗಿ ಧ್ವನಿ ಎತ್ತೋಣ : ನ್ಯಾಷನಲ್ ವಿಮೆನ್ಸ್ ಫ್ರಂಟ್

Prasthutha|

ಬದಲಾವಣೆಗಾಗಿ ಧ್ವನಿ ಎತ್ತೋಣ ಎಂಬ ಘೋಷಾ ವಾಕ್ಯದಡಿಯಲ್ಲಿ ನ್ಯಾಷನಲ್ ವಿಮೆನ್ಸ್ ಫ್ರಂಟ್ ಕರ್ನಾಟಕದ ವತಿಯಿಂದ ರಾಜ್ಯದ ವಿವಿದೆಡೆಗಳಲ್ಲಿ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಆಚರಿಸಲಾಯಿತು.

- Advertisement -

ರಾಷ್ಟ್ರಾದ್ಯಂತ ಮಹಿಳೆಯರು ಮುಂಚೂಣಿಯಲ್ಲಿದ್ದು ಕೊಂಡು ಬೀದಿ ಹೋರಾಟ ನಡೆಸುತ್ತಿದ್ದಾರೆ. ಇದು ದೇಶದ ಅಸಹಿಷ್ಣುತೆಯ ಕಟ್ಟೆ ಒಡೆದಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಈ ಮಹಿಳಾ ಹೋರಾಟದ ಮುನ್ನುಡಿಯನ್ನು ಒಕ್ಕೊರೊಲಿನ ಧ್ವನಿಯಾಗಿ ಹಾಗೂ ಮಹಿಳಾ ಶಕ್ತಿಯಾಗಿ ಹೊರಹೊಮ್ಮಿಸುವಂತೆ ರಾಜ್ಯಾದ್ಯಂತ ಮಹಿಳೆಯರಲ್ಲಿ ಜಾಗೃತಿ ಮೂಡಿಸಲಾಯಿತು.

ಮಡಿಕೇರಿ, ಮಂಡ್ಯ, ಉಡುಪಿ, ಪುತ್ತೂರು, ಉಪ್ಪಿನಂಗಡಿ, ಬೆಂಗಳೂರು, ಮೈಸೂರು ಸೇರಿದಂತೆ ಕೋವಿಡ್ ಸಮಯದಲ್ಲಿ ಸಾಮಾಜಿಕ ಸೇವೆಯಲ್ಲಿ ತೊಡಗಿಸಿದ ದಾದಿಯರು, ವೈದ್ಯರು, ಪೌರ ಕಾರ್ಮಿಕರು ಅಲ್ಲದೇ ವಿಶಿಷ್ಟ ಸಾಧನೆ ಗೈದ ಅನೇಕ ಮಹಿಳೆಯರನ್ನು ಸನ್ಮಾನಿಸಲಾಯಿತು.

- Advertisement -