ಮಹಿಳೆಯರ ಅವಮಾನ, ಕೋಮುದ್ವೇಷದ ವಿರುದ್ಧ ಧ್ವನಿಯೆತ್ತೋಣ: ರಾಹುಲ್ ಗಾಂಧಿ

Prasthutha|

ದೆಹಲಿ: ಮಹಿಳೆಯರ ಅವಮಾನ ಮತ್ತು ಕೋಮುದ್ವೇಷದ ವಿರುದ್ಧ ಧ್ವನಿಯೆತ್ತೋಣ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

- Advertisement -

ಈ ಬಗ್ಗೆ ಟ್ವೀಟ್ ಮಾಡಿರುವ ಅವರು,  ಮುಸ್ಲಿಂ ಮಹಿಳೆಯರ ಹರಾಜು ಮಾಡುವ ಆ್ಯಪ್  ವಿರುದ್ಧ ಭಾನುವಾರ ಧ್ವನಿ ಎತ್ತಿರುವ ರಾಹುಲ್ ಗಾಂಧಿ ಮಹಿಳೆಯರ ಅವಮಾನ ಮತ್ತು ಕೋಮುದ್ವೇಷದ ವಿರುದ್ಧ ಎಲ್ಲರೂ ಒಂದೇ ಧ್ವನಿಯಲ್ಲಿ ನಿಂತಾಗ ಮಾತ್ರ ಅದು  ನಿಲ್ಲುತ್ತದೆ. “ವರ್ಷ ಬದಲಾಗಿದೆ, ಪರಿಸ್ಥಿತಿಯೂ ಬದಲಾಗಲಿ, ಈಗ ನಾವು ಮಾತನಾಡಬೇಕಾಗಿದೆ” ಎಂದು ಬರೆದಿದ್ದಾರೆ.

ದೆಹಲಿ ಮೂಲದ ಪತ್ರಕರ್ತೆಯೊಬ್ಬರು ತನ್ನ ತಿರುಚಿದ ಫೋಟೋಗಳನ್ನು ಅಪ್‌ ಲೋಡ್ ಮಾಡಿದ್ದಕ್ಕಾಗಿ ವೆಬ್‌ ಸೈಟ್‌ ಒಂದರ ವಿರುದ್ಧ ದೆಹಲಿ ಪೊಲೀಸರಿಗೆ ದೂರು ನೀಡಿದ ನಂತರ, ಹಲವಾರು ರಾಜಕಾರಣಿಗಳು ಅದನ್ನು ಖಂಡಿಸಿದರು. ದೆಹಲಿ ಪೊಲೀಸರು ಶನಿವಾರ ರಾತ್ರಿ ಎಫ್‌ ಐಆರ್ ದಾಖಲಿಸಿದ್ದಾರೆ.

Join Whatsapp