ಮಾನ ಇದ್ದವರು ಮಾನನಷ್ಟ ಮೊಕದ್ದಮೆ ಹಾಕಲಿ, ಪ್ರತಾಪ್ ಸಿಂಹ ಯಾಕೆ ಹಾಕಿದ್ದಾರೆ?: ಪ್ರದೀಪ್ ಈಶ್ವರ್

Prasthutha|

ಬೆಂಗಳೂರು: ಸಂಸದ ಪ್ರತಾಪ್ ಸಿಂಹ ತನ್ನ ಕುರಿತು ಶಾಸಕ ಪ್ರದೀಪ್ ಈಶ್ವರ್ ಮುಠ್ಠಾಳ, ಅಯೋಗ್ಯ ಎಂದದಕ್ಕಾಗಿ ಬೆಂಗಳೂರಿನ ಜನ ಪ್ರತಿನಿಧಿಗಳ ವಿಶೇಷ ಕೋರ್ಟ್ ನಲ್ಲಿ ಮಾನನಷ್ಟ ಕೇಸ್ ದಾಖಲಿಸಿದ್ದಾರೆ. ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರದೀಪ್ ಕುಮಾರ್, ಮಾನ ಇದ್ದವರು ಮಾನನಷ್ಟ ಕೇಸ್ ದಾಖಲಿಸುತ್ತಾರೆ. ಪ್ರತಾಪ್ ಸಿಂಹ ಯಾಕೆ ದಾಖಲಿಸಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

- Advertisement -

ಪ್ರತಾಪ್ ಸಿಂಹ ಬೈಬರ್ತ್ ರೈಟರ್ ಇರಬಹುದು. ಆದರೆ ನಾನು ಫೈಟರ್ ಎಂಬುದು ಪ್ರತಾಪ್ ಸಿಂಹಗೆ ಗೊತ್ತಿರಲಿ. ಮಾಧ್ಯಮಗಳ ಮುಂದೆ ಬಿಲ್ಡ್ ಅಪ್ ಕೊಡುವುದಲ್ಲ, ತಾಕತ್ತಿದ್ದರೆ ಪ್ರತಾಪ್ ಸಿಂಹ ಚರ್ಚೆಗೆ ಬರಬೇಕು ಎಂದಿದ್ದಾರೆ.

ಅಯೋಗ್ಯ ಮುಠ್ಠಾಳನನ್ನು ಅಯೋಗ್ಯ ಮುಠಾಳ ಅಂತಾನೆ ಹೇಳುತ್ತೇವೆ. ನಿಮ್ಮ ಮಾನನಷ್ಟ ಕೇಸಿಗೆ ಹೆದರುವುದಿಲ್ಲ ಎಂದು ಪ್ರದೀಪ್ ಈಶ್ವರ ವಾಗ್ದಾಳಿ ನಡೆಸಿದ್ದಾರೆ.



Join Whatsapp