ಪ.ಬಂಗಾಳ: ಶಾಜಹಾನ್ ಬಂಧಿಸಲು ಸರ್ಕಾರಕ್ಕೆ ಹೈಕೋರ್ಟ್‌ ಆದೇಶ

Prasthutha|

ಕೋಲ್ಕತಾ: ಪಡಿತರ ಹಗರಣ, ಭೂಕಬಳಿಕೆ ಹಾಗೂ ಸಂದೇಶ್‌ಖಾಲಿಯಲ್ಲಿ ಮಹಿಳೆಯುರ ಕಿರುಕುಳ ಆರೋಪ ಎದುರಿಸುತ್ತಿರುವ ಟಿಎಂಸಿ ನಾಯಕ ಶೇಖ್‌ ಶಾಹಜಾನ್‌ ಅವರನ್ನು ಬಂಧಿಸುವಂತೆ ಪ.ಬಂಗಾಳ ಸರ್ಕಾರಕ್ಕೆ ಕಲ್ಕತ್ತಾ ಹೈಕೋರ್ಟ್‌ ಆದೇಶಿಸಿದೆ.

- Advertisement -

ಶೇಖ್ ಕುರಿತಾದ ಪ್ರಕರಣದ ವಿಚಾರಣೆ ನಡೆಸಿದ ಮುಖ್ಯ ನ್ಯಾಯಾಧೀಶ ನ್ಯಾಯಮೂರ್ತಿ ಶಿವಜ್ಞಾನಂ ಅವರ ಪೀಠ, ನಾವು ಶೇಖ್‌ ವಿರುದ್ಧದ ಬಂಗಾಳ ಪೊಲೀಸ್‌-ಸಿಬಿಐ ಜಂಟಿ ತನಿಖೆಗೆ ತಡೆ ನೀಡಿದ್ದೆವು. ಆದರೆ ಈಗಿನ ಗಂಭೀರ ಆರೋಪಗಳಿಗೆ ಸಂಬಂಧಿಸಿದಂತೆ ನಾವು ಯಾವುದೇ ತಡೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು ಹಾಗೂ ವಿಚಾರಣೆಯನ್ನು ಮಾ.4ಕ್ಕೆ ಮುಂದೂಡಿದರು.

Join Whatsapp