ಮಂಗಳೂರು ಪಬ್ ದಾಳಿ ನಡೆಸಿದ ಬಜರಂಗದಳದ ಗೂಂಡಾಗಳ ವಿರುದ್ಧ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳಲಿ: SDPI

Prasthutha|

ಸಂಘಪರಿವಾರದ ವಿರುದ್ಧ ಪೊಲೀಸ್ ಇಲಾಖೆಯ ಮೃದು ಧೋರಣೆಯೇ ಇಂತಹ ಅನೈತಿಕ ಪೋಲಿಸ್‌ಗಿರಿಗೆ ಕಾರಣ

- Advertisement -

ಮಂಗಳೂರು: ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ಪಬ್ ನಲ್ಲಿ ಪಾರ್ಟಿ ಮಾಡಿದ್ದಾರೆ ಎಂಬ ನೆಪವೊಡ್ಡಿ ನಿನ್ನೆ ರಾತ್ರಿ ಬಲ್ಮಠ ಸಮೀಪದ ಪಬ್ ಗೆ ದಾಳಿ ನಡೆಸಿದ ಬಜರಂಗದಳದ ಗೂಂಡಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಎಸ್ ಡಿಪಿಐ ದ.ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದಾತ್ ಬಜತ್ತೂರು ಆಗ್ರಹಿಸಿದ್ದಾರೆ.

ವಿದ್ಯಾರ್ಥಿಗಳು ಪಬ್ ನಲ್ಲಿ ಪಾರ್ಟಿ ನಡೆಸಿರುವುದು ಸರಿಯಾ? ತಪ್ಪಾ ?ಎಂಬುದನ್ನು ತೀರ್ಪು ನೀಡಿ ಇವರಿಗೆ ದಾಳಿ ನಡೆಸಲು ಅಧಿಕಾರ ನೀಡಿದವರು ಯಾರು ?. ನೈತಿಕತೆಯ ಹೆಸರಿನಲ್ಲಿ ಅನೈತಿಕ ಪೊಲೀಸ್ ಗಿರಿಯನ್ನು ಬಜರಂಗದಳದ ಬೀದಿ ಗೂಂಡಾಗಳು ಮಾಡುವುದಾದರೆ ರಾಜ್ಯದ ಪೊಲೀಸ್ ಇಲಾಖೆ ಹಾಗೂ ನ್ಯಾಯಾಲಯಗಳ ಕೆಲಸ ಏನು? ಎಂದು ಅವರು ಪ್ರಶ್ನಿಸಿದ್ದಾರೆ.

- Advertisement -

ಬಜರಂಗದಳದ ಗೂಂಡಗಳ ವರ್ತನೆ, ಬಾಯಲ್ಲಿ ಅಸಹ್ಯ, ಆಶ್ಲೀಲ ಪದಗಳನ್ನು ಬಳಸಿ ನಿಂದಿಸುವ ಹಾಗೂ ದಾಳಿ ನಡೆಸುವ ಕೃತ್ಯವು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದರೂ ಇವರ ವಿರುದ್ಧ ಮಂಗಳೂರು ಪೊಲೀಸ್ ಆಯುಕ್ತರು ಮೃದು ಧೋರಣೆ ಹೊಂದಲು ಹಾಗೂ ಈ ಘಟನೆಯಲ್ಲಿ ಇವರ ತಪ್ಪೇ ಇಲ್ಲವೆಂಬಂತೆ ರೀತಿಯಲ್ಲಿ ಹೇಳಿಕೆ ನೀಡಲು ಕಾರಣವೇನು?. ಸಂಘಪರಿವಾರ ಗೂಂಡಗಳ ವಿರುದ್ಧ ಪೋಲಿಸ್ ಇಲಾಖೆಯ ಮೃದು ಧೋರಣೆಯೇ ಇಂತಹ ಅನೈತಿಕ ಪೋಲಿಸ್ ಗಿರಿ ಅಧಿಕಗೊಳ್ಳಲು ಕಾರಣವಾಗಿದೆ ಎಂದು ಅನ್ವರ್ ಸಾದಾತ್ ಆರೋಪಿಸಿದ್ದಾರೆ.

ಒಂದು ವೇಳೆ ಈ ರೀತಿಯ ಕೃತ್ಯವನ್ನು ಯಾವುದಾದರೂ ಮುಸ್ಲಿಂ ಸಂಘಟನೆಗಳೋ ಅಥವಾ ಮುಸ್ಲಿಂ ಯುವಕರು ನಡೆಸಿರುತ್ತಿದ್ದರೆ ಪೋಲಿಸರು ಇದೇ ರೀತಿಯ ಹೇಳಿಕೆಗಳನ್ನು ಕೊಡುತ್ತಿದ್ದರಾ? ಪೋಲಿಸ್ ಇಲಾಖೆ ಸಂಘಪರಿವಾರದೊಂದಿಗೆ ಮೃದು ಧೋರಣೆ ನಿಲ್ಲಿಸದ ತನಕ ಇಂತಹ ಅನೈತಿಕ ಕೃತ್ಯಗಳು ಅವರ ಕಡೆಯಿಂದ ನಡೆಯುತ್ತಲೇ ಇರುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.

ಬಜರಂಗದಳದ ಗೂಂಡಾಗಳಿಗೆ ತಾಕತ್ತಿದ್ದರೆ ಮ್ಯಾನ್ ಪವರ್ ಹೆಸರಿನಲ್ಲಿ ಹಿಂದೂ ಹೆಣ್ಣು ಮಕ್ಕಳನ್ನು ವೇಶ್ಯಾವಟಿಕೆ ವೃತ್ತಿಗೆ ತಳ್ಳಿ ಹಣ ಸಂಪಾದಿಸುವ ಹಾಗೂ ಮಂಗಳೂರಿನ ಲಾಡ್ಜ್ ಗಳಲ್ಲಿ ನಡೆಯುತ್ತಿರುವ ವೇಶ್ಯಾವಾಟಿಕೆಗೆ ಬೆಂಗಾವಲು ನೀಡುವ ಬಜರಂಗದಳದ ನಾಯಕರ ಕಚೇರಿಗೆ ಹಾಗೂ ಮನೆಗೆ ದಾಳಿ ನಡೆಸಲಿ, ಅದೇ ರೀತಿ ಅತ್ಯಾಚಾರ, ಅನೈತಿಕ ಸಂಬಂಧ ಹೊಂದಿರುವ ಆರೋಪ ಇರುವ ಹಲವಾರು ಬಿಜೆಪಿಯ ನಾಯಕರು, ಸಚಿವರು, ಶಾಸಕರ ಕಚೇರಿ ಹಾಗೂ ಮನೆಗಳಿಗೆ ದಾಳಿ ನಡೆಸಲಿ. ಹಾಗಾಗಿ ಪೋಲಿಸ್ ಇಲಾಖೆ ಪಬ್ ದಾಳಿ ನಡೆಸಿ ಅನೈತಿಕ ಗೂಂಡಾಗಿರಿ ನಡೆಸಿದ ಬಜರಂಗದಳದ ಗೂಂಡಾಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಂಡು ಬಂಧಿಸಬೇಕೆಂದು ಎಂದು ಅನ್ವರ್ ಸಾದಾತ್ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

Join Whatsapp