ಮೊಹಿಬಾ ವಂಟಮುರಿ ಅವರ ಸಂಶೋಧನಾ ಪ್ರಬಂಧಕ್ಕೆ ಗೌರವ ಡಾಕ್ಟರೇಟ್

Prasthutha|

ಬೆಂಗಳೂರು: ಲೇಖಕಿ, ಉಪನ್ಯಾಸಕಿ ಮೊಹಿಬಾ ವಂಟಮುರಿ ಅವರು ಉರ್ದು ಸಾಹಿತ್ಯದಲ್ಲಿ ಮಂಡಿಸಿದ್ದ ಮಹಾ ಪ್ರಬಂಧಕ್ಕೆ ಎಸ್. ವಿ. ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪ್ರದಾನ ಮಾಡಿದೆ.

- Advertisement -

ಮೊಹಿಬಾ ವಂಟಮುರಿ ಅವರು ಯಸೀರ್ ಕರ್ನೂಲವಿ ಕಾವ್ಯಗಳ ಕುರಿತು “ರೊಮ್ಯಾಂಟಿಸಿಸಂ ಮತ್ತು ನಾರ್ಸಿಸಿಸಮ್ ಇನ್ ಕಲಾಂ-ಎ-ಯಸೀರ್” ಎಂಬ ಶೀರ್ಷಿಕೆಯಡಿಯಲ್ಲಿ ಆಂಧ್ರಪ್ರದೇಶ ತಿರುಪತಿ ಎಸ್.ವಿ ವಿಶ್ವವಿದ್ಯಾಲಯದ ಉರ್ದು ವಿಭಾಗದ ಮಾಜಿ ಅಧ್ಯಕ್ಷ ಖ್ಯಾತ ತಜ್ಞ ಅಬ್ದುಲ್ ಸತ್ತಾರ್ ಸಾಹಿರ್ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ ಸಮಗ್ರ ಸಂಶೋಧನಾ ಕಾವ್ಯ ಮಹಾ ಪ್ರಬಂಧಕ್ಕೆ ಡಾಕ್ಟರೇಟ್ ನೀಡಲಾಗಿದೆ.

Join Whatsapp