ರೇಣುಕಾ ಸ್ವಾಮಿ ಹತ್ಯೆ: ಆರೋಪಿಗಳಿಗೆ ತ್ವರಿತಗತಿಯಲ್ಲಿ ತನಿಖೆಯಾಗಿ ಶಿಕ್ಷೆಯಾಗಲಿ; ತಾಹೇರ್ ಹುಸೇನ್

Prasthutha|

ಬೆಂಗಳೂರು: ರೇಣುಕಾ ಸ್ವಾಮಿ ಹತ್ಯಾ ಪ್ರಕರಣದ ಆರೋಪಿಗಳನ್ನು ತ್ವರಿತಗತಿಯಲ್ಲಿ ತನಿಖೆ ನಡೆಸಿ ಶೀಘ್ರವಾಗಿ ಶಿಕ್ಷೆಗೆ ಗುರಿಪಡಿಸಲಿ. ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಒದಗಿಸಲಿ ಎಂದು ವೆಲ್ ಫೇರ್ ಪಾರ್ಟಿ ಆಫ್ ಇಂಡಿಯಾ ಇದರ ಕರ್ನಾಟಕ ರಾಜ್ಯಾಧ್ಯಕ್ಷ ಅಡ್ವಕೇಟ್ ತಾಹೇರ್ ಹುಸೇನ್ ಆಗ್ರಹಿಸಿದ್ದಾರೆ.

- Advertisement -

ಈ ಕುರಿತು ಮಾತನಾಡಿದ ಅವರು,  ಪ್ರತಿಷ್ಠಿತರು ಲೀಲಾಜಾಲವಾಗಿ  ಆರೋಪ ಮುಕ್ತರಾಗಿ ಹೊರಬರುತ್ತಿರುವುದು ಇಂದು ಸಾಮಾನ್ಯವಾಗಿದೆ.  ನ್ಯಾಯ ತೀರ್ಮಾನಗಳ ವಿಳಂಬ ವೇ  ಕೊಲೆ ಅತ್ಯಾಚಾರಗಳು ವ್ಯಾಪಕವಾಗಲು  ಕಾರಣವಾಗುತ್ತದೆ.  ಜನರಲ್ಲಿ ಕಾನೂನಿನ ಭಯ ಇಲ್ಲದಾಗಿದೆ.  ಓರ್ವ ನಟಿಗೆ ಅಶ್ಲೀಲ ಸಂದೇಶ ಕಳುಹಿಸಿದ ಮಾತ್ರಕ್ಕೆ ಅಪಹರಿಸಿ ಹತ್ಯೆ ಮಾಡುತ್ತಾರೆಂದಾದರೆ ಕಾನೂನಿನ ಬಗ್ಗೆ  ಇವರಿಗೆ ಎಷ್ಟು ಗೌರವ ಭಯ ಇದೆ ಎಂಬುದನ್ನು ಅರ್ಥೈಸಬಹುದು.  ನಿಜವಾಗಿ ಅವರಿಗೆ ಕಾನೂನಿನ ಸುಪರ್ಧಿಗೆ ರೇಣುಕಾ ಸ್ವಾಮಿಯನ್ನು ನೀಡಬಹುದಾಗಿತ್ತು. ತಾವೇ ಕಾನೂನನ್ನು ಕೈಗೆತ್ತಿಕೊಂಡು  ಹಿಂಸಿಸಿ ಕೊಂದ ಇಂತಹ ಸೆಲೆಬ್ರಿಟಿ ಗಳನ್ನು ನೋಡಲು ಜನರ ನೂಕು ನುಗ್ಗಲು. ಅಭಿಮಾನಿಗಳ ದಂಡೂ ಸೇರುತ್ತವೆ. ಕೊನೆಗೆ ಆರೋಪಿಗಳು ತಮ್ಮ ರಾಜಕೀಯ ಪ್ರಭಾವ ಬಳಸಿ ಹೊರ ಬರಬಹುದು. ಆದರೆ ಅದಕ್ಕೆ ಅವಕಾಶ ನೀಡಬಾರದು.  ಸಂತ್ರಸ್ತರಿಗೆ ನ್ಯಾಯ ದೊರಕಿಸಿ ಕೊಡಬೇಕು.

ಇಂತಹ ಕೃತ್ಯಗಳು ಮರುಕಳಿಸಬಾರದು. ‌ ಅನೇಕ ಕುಟುಂಬಗಳು ಅನಾಥವಾಗುವುದರಿಂದ ತಪ್ಪಿಸಬೇಕು. ಕೋಮು  ವೈಷಮ್ಯ ಮತ್ತಿತರ ಕಾರಣಗಳಿಗಾಗಿ ಆಗುವ ಕೊಲೆಗಳಿಗೂ ತ್ವರಿತಗತಿಯಲ್ಲಿ ತನಿಖೆ ನಡೆಸಿ ಶಿಕ್ಷೆಗೆ ಗುರಿಪಡಿಸಬೇಕಾಗಿದೆ.  ದನ ಸಾಗಾಟಗಾರರ ಮೇಲೆ ಹಲ್ಲೆ ನೈತಿಕ ಪೋಲೀಸ್ ಗಿರಿ, ಇವೆಲ್ಲವೂ ಕಾನೂನಿನ ಬಗ್ಗೆ ಭಯವಿಲ್ಲದಿರುವುದರಿಂದ. ನಡೆಯುತ್ತವೆ. ಇವಕ್ಕೆಲ್ಲ ಅಂತ್ಯ ಹಾಡಬೇಕಿದ್ದರೆ ಕಾನೂನು ಬಿಗಿಯಾಗಿ ಅನುಷ್ಠಾನಕ್ಕೆ ಬರಬೇಕಾಗಿದೆ. ಆ ನಿಟ್ಟಿನಲ್ಲಿ ನಮ್ಮ ಇಲಾಖೆ ಕಾರ್ಯ ಪ್ರವ್ರತ್ತವಾಗಲಿ ಎಂದು ಅವರು ಹೇಳಿದರು.



Join Whatsapp