ವಿದ್ಯಾರ್ಥಿಗಳು ಬರುವ ಮೊದಲೇ ತರಗತಿಗೆ ಬಂದು ಅಡಗಿ ಕುಳಿತ ಚಿರತೆ: ಓರ್ವನ ಮೇಲೆ ದಾಳಿ

Prasthutha|

ಲಖ್ನೋ: ಶಾಲೆಯೊಂದಕ್ಕೆ ಚಿರತೆ ದಾಳಿ ನಡೆಸಿ ಒಬ್ಬ ವಿದ್ಯಾರ್ಥಿಯನ್ನು ಗಾಯಗೊಳಿಸಿದ ಘಟನೆ ಉತ್ತರಪ್ರದೇಶದ ಅಲಿಗಢದಲ್ಲಿ ನಡೆದಿದೆ.

- Advertisement -

ಅಲಿಗಢದ ಚೌಧರಿನಿ ಆಲ್ ಸಿಂಗ್ ಇಂಟರ್ ಕಾಲೇಜಿನ ಕೊಠಡಿಯಲ್ಲಿ ಮಲಗಿದ್ದ ಚಿರತೆಯು ಬೆಳಿಗ್ಗೆ ವಿದ್ಯಾರ್ಥಿ ಒಳ ಪ್ರವೇಶಿಸಿದಾಗ ದಾಳಿ ನಡೆಸಿದೆ ಎಂದು ವರದಿಯಾಗಿದೆ.

ಗಾಯಗೊಂಡ ವಿದ್ಯಾರ್ಥಿಯನ್ನು ಲಕ್ಕಿರಾಜ್ ಸಿಂಗ್ ಎಂದು ಗುರುತಿಸಲಾಗಿದೆ. ವಿದ್ಯಾರ್ಥಿಯ ಬೆನ್ನು ಹಾಗೂ ಕೈಗಳಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

- Advertisement -

ವಿದ್ಯಾರ್ಥಿಗಳು ಬರುವ ಮೊದಲೇ ಕ್ಲಾಸು ರೂಮಿನಲ್ಲಿ ಬಂದು ಮಲಗಿದ್ದ ಚಿರತೆ ವಿದ್ಯಾರ್ಥಿಯೊಬ್ಬನ ಮೇಲೆ ದಾಳಿ ಮಾಡಿದೆ. ಆತನನ್ನು ಕೂಡಲೇ ಆಸ್ಪತ್ರೆಗೆ ಸೇರಿಸಿದ್ದೇವೆ ಎಂದು ಸ್ಕೂಲ್ ಪ್ರಿನ್ಸಿಪಾಲ್ ಯೋಗೇಶ್ ಯಾದವ್ ತಿಳಿಸಿದ್ದಾರೆ.
ವಿಷಯ ತಿಳಿದು ಶಾಲೆಯ ಸುತ್ತಲೂ ಜಮಾಯಿಸಿದ ಸ್ಥಳೀಯರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿ ಚಿರತೆಯನ್ನು ಹಿಡಿದಿದ್ದಾರೆ ಎಂದು ವರದಿಯಾಗಿದೆ.



Join Whatsapp