ಬ್ರಸಿಲ್ಲ: ಬ್ರೆಜಿಲ್ಲಿನ ಮಾಜಿ ಅಧ್ಯಕ್ಷ ಹಾಗೂ ಹಿರಿಯ ನಾಯಕ ಲೂಯಿಜ್ ಇನಾಸಿಯೋ ಲುಲಾ ಡ ಸಿಲ್ವಾ ಹಾಲಿ ಅಧ್ಯಕ್ಷ ಬಲಪಂಥೀಯ ಜೈರ್ ಬೊಲ್ಸೊನಾರೋರನ್ನು ಸೋಲಿಸಿ ಮತ್ತೊಮ್ಮೆ ಬ್ರೆಜಿಲ್ ನ ಅಧ್ಯಕ್ಷರಾಗಿ ಪುನರಾಯ್ಕೆಯಾಗಿದ್ದಾರೆ.
ಲುಲಾ ಅವರು 51% ಮತ ಪಡೆದರೆ ಬೊಲ್ಸೊನಾರೋ 49% ಮತ ಪಡೆದರು. ಹಾಗಾಗಿ ಇದು ತೀರಾ ಕಠಿಣ ಪೈಪೋಟಿಯ ಸ್ಪರ್ಧೆಯಾಗಿತ್ತು. ದಶಕದ ಬಲಪಂಥೀಯ ಕೊನೆಗೊಂಡಂತಾಗಿದೆ.
ಕೋವಿಡ್ ನಿರ್ವಹಣೆಯಲ್ಲಿ ವಿಫಲವಾಗಿರುವುದೇ ಬೊಲ್ಸೊನಾರೋ ಅವರ ಚುನಾವಣಾ ಸೋಲಿಗೆ ಕಾರಣ ಎನ್ನಲಾಗುತ್ತಿದೆ.
ಶಾಂತಿ ಮತ್ತು ಒಗ್ಗಟ್ಟು ಕಾಪಾಡಿ ಹಾಗೂ ಅಮೆಜಾನ್ ಉಳಿಸಬೇಕು ಎಂದು ಗೆಲುವಿನ ಬಳಿಕ ಲುಲಾ ಹೇಳಿದರು.
ಲಿಂಗ ಸಮಾನತೆ ಸಾಧಿಸಬೇಕು, ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಅವಕಾಶ ಸಿಗಬೇಕು. ದೇಶದ 3.31 ಕೋಟಿ ಜನರು ಹಸಿವಿನತ್ತ ವಾಲಿದ್ದಾರೆ ಅದನ್ನು ಮೊದಲು ತೊಡೆಯಬೇಕು ಎಂದೂ ಅವರು ಹೇಳಿದರು.
“ಹಣಕಾಸು ಚಕ್ರ ಮತ್ತೆ ಉರುಳುತ್ತದೆ, ಜಗತ್ತಿಗೆ ಅಮೆಜಾನ್ ಅಗತ್ಯ, ಉಳಿಸುವುದು ನಮ್ಮ ಕರ್ತವ್ಯ. ಜನರು ಆಂತರಿಕ ಯುದ್ಧ ಇಲ್ಲವೇ ಬಾಹ್ಯ ಕದನವನ್ನು ಬಯಸಿಲ್ಲ, ಒಡೆದಂತಿರುವ ದೇಶದ ಒಗ್ಗಟ್ಟು ಮುಖ್ಯ” ಎಂದು 77ರ ನಾಯಕ ಲುಲಾ ಹೇಳಿದರು.
“ಬ್ರೆಜಿಲ್ ವಾಪಸು ಬಂದಿದೆ ಎಂದು ಜಗತ್ತಿಗೆ ಹೇಳೋಣ. ಅದನ್ನು ಗಡಿಪಾರು ಮಾಡಿ ಇಡುವುದು ಹಣದ ದೇಶಗಳಿಂದ ಆಗದ ಕೆಲಸ” ಎಂದು ಲುಲಾ ಘೋಷಿಸಿದರು.
ಪಾಶ್ಚಾತ್ಯ ಬಂಡವಾಳಶಾಹಿ ದೇಶಗಳ ಕಣ್ಣು ನಮ್ಮ ಚುನಾವಣೆ ಫಲಿತಾಂಶದ ಮೇಲೆಯೇ ಇತ್ತು. ಈಗ ಅಮೆಜಾನ್ ಮಳೆ ಕಾಡು ಮತ್ತು ಅದು ಭವಿಷ್ಯದಲ್ಲಿ ಲೋಕದ ಹವಾಮಾನದ ಮೇಲೆ ಬೀರುವ ಪರಿಣಾಮದ ಮೇಲೆ ಗಮನ ನೆಡಬೇಕು ಎಂದು ಹೇಳಿದರು.