ಗೋ ಹತ್ಯೆ ನಿಷೇಧ ಕಾಯ್ದೆ ವಿಷಯ ರೈತರಿಗೆ ಬಿಟ್ಟುಬಿಡಿ: ಕೋಡಿಹಳ್ಳಿ ಚಂದ್ರಶೇಖರ್

Prasthutha|

ಹಾವೇರಿ: ಗೋ ಹತ್ಯೆ ನಿಷೇಧ ಕಾಯ್ದೆ ತರಬೇಕಾ ಬೇಡವಾ ಎಂಬ ವಿಷಯವನ್ನ ರೈತರಿಗೆ ಬಿಟ್ಟುಬಿಡಿ ಎಂದು ರೈತಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅವರು ಅಭಿಪ್ರಾಯಪಟ್ಟಿದ್ದಾರೆ.

- Advertisement -

ಹಾವೇರಿಯಲ್ಲಿ ಮಾತನಾಡಿದ ಅವರು, ರೈತರನ್ನ ಮನೆಹಾಳರನ್ನಾಗಿ ಮಾಡುವ ಕಾನೂನು ಇದ್ದರೇನು? ಬಿಟ್ಟರೇನು? ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ರೀತಿಯ ಗೋ ಹತ್ಯೆ ನಿಷೇಧ ಕಾನೂನು ಮಾಡುವ ಸರ್ಕಾರಗಳಿಗೆ, ವ್ಯಕ್ತಿಗಳಿಗೆ ಸಾಮಾನ್ಯ ಜ್ಞಾನ ಇರಬೇಕು. ಯಾವ ಹಸು ಗೋಶಾಲೆಗೆ ಹೋಗಬೇಕು, ಯಾವ ಹಸು ಕಸಾಯಿಖಾನೆಗೆ ಹೋಗಬೇಕು ಎನ್ನುವ ಕುರಿತಂತೆ ತಿಳಿವಳಿಕೆ ಇರಬೇಕು ಎಂದು ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅಭಿಪ್ರಾಯಪಟ್ಟಿದ್ದಾರೆ.

ಗೋ ಹತ್ಯೆ ನಿಷೇಧ ಎಂಬುವ ಪದ ಬಹಳ ಭಾವನಾತ್ಮಕವಾದುದು. ಇದನ್ನ ಬ್ಲಾಕ್ ಮೇಲ್ ಎಂತಲೂ ಕರೆಯುತ್ತೇವೆ ಎಂದು ತಿಳಿಸಿದರು.

- Advertisement -

ಗೋ ಹತ್ಯೆ ನಿಷೇಧ ರೈತನಿಗೆ ಸಂಬಂಧಪಟ್ಟ ವಿಷಯ. ಸರ್ಕಾರ ಈ ಕುರಿತಂತೆ ಏಕಾಏಕಿ ನಿರ್ಧಾರಗಳನ್ನ ತೆಗೆದುಕೊಳ್ಳಬಾರದು. ಗೋ ಹತ್ಯೆ ನಿಷೇಧ ಕಾಯ್ದೆ ವಾಪಸ್ ತೆಗೆದುಕೊಳ್ಳಬಾರದು ಎಂದು ಕೆಲ ಮಠಾಧೀಶರು ಸಹ ಸಿಎಂಗೆ ಮನವಿ ಮಾಡಿದ್ದಾರೆ. ಹೈನುಗಾರಿಕೆಗೆ ಅಂತಾ ತೆಗೆದುಕೊಂಡು ಹೋಗುವ ಹಸುಗಳನ್ನ ಹಿಂದೂ ಸಂಘಟನೆ, ಬಜರಂಗದಳ ಸಂಘಟನೆ ಸದಸ್ಯರು ತಡೆಯುತ್ತಾರೆ. ಅಲ್ಲಿಗೆ ಪೊಲೀಸರು ಬರುತ್ತಾರೆ. ಲಾರಿ ಸೀಜ್ ಆಗುತ್ತೆ. ಚಾಲಕ ಅರೆಸ್ಟ್​ ಆಗುತ್ತಾರೆ. ಹಸುಗಳನ್ನ ಗೋಶಾಲೆಗಳಿಗೆ ಕಳುಹಿಸಲಾಗುತ್ತದೆ. ಇದೊಂದು ರೀತಿಯ ವರ್ತುಲ ಇದ್ದಂತೆ. ನಂತರ ಮೂರ್ನಾಲ್ಕು ತಿಂಗಳಾದ ನಂತರ ಹಸುಗಳು ರೈತರಿಗೆ ಸಿಕ್ಕಾಗ ಅವು ಮೊದಲಿನಂತೆ ಇರುವುದಿಲ್ಲ ಎಂದು ತಿಳಿಸಿದರು.

Join Whatsapp