ಅಂಟಾರ್ಟಿಕಾದಲ್ಲಿ ಪೂರ್ಣ ಕಾಣಿಸಿದ ವರ್ಷದ ಕೊನೆಯ ಸೂರ್ಯಗ್ರಹಣ

Prasthutha|

ಚಂದ್ರನ ನೆರಳು ಬೀಳುವುದರಿಂದ ಸೂರ್ಯನು ಭೂಮಿಯಲ್ಲಿರುವವರಿಗೆ ಕಾಣದಾಗುವುದೇ ಸೂರ್ಯ ಗ್ರಹಣ. ಚಂದ್ರನ ಆಕಾರ ಚಿಕ್ಕದಾದುದರಿಂದ ಪೂರ್ಣ ಸೂರ್ಯ ಗ್ರಹಣ ಆಗುವುದು ಅಪರೂಪ. ಆದರೂ ಭೂಮಿಯ ಎಲ್ಲ ಕಡೆ ಅದು ಪೂರ್ಣ ಸೂರ್ಯ ಗ್ರಹಣ ಆಗಿರುವುದಿಲ್ಲ. ಶನಿವಾರ ವರ್ಷದ ಪೂರ್ಣ ಸೂರ್ಯಗ್ರಹಣ ಅಂಟಾರ್ಟಿಕಾದಲ್ಲಿ ಪೂರ್ಣ ರೂಪದಲ್ಲಿ ಕಾಣಿಸಿತು. ಅದನ್ನು ಬೇರೆ ವಿಧಾನದಿಂದ ಹಾಗೂ ಅಲ್ಲಿ ಸಂಶೋಧನೆಯಲ್ಲಿ ತೊಡಗಿರುವವರು ನೋಡಿದ್ದಾರೆ.

- Advertisement -


ದಕ್ಷಿಣ ಗೋಲಾರ್ಧದ ಕೆಲವು ಕಡೆ ಈ ಪೂರ್ಣ ಸೂರ್ಯ ಗ್ರಹಣದ ಕೆಲವು ಅಂಶಗಳನ್ನು ಕೆಲವು ಕಡೆ ನೋಡಲು ಸಾಧ್ಯವಾಯಿತು. ಸೂರ್ಯನ ಹೊರಾವರಣವಾದ ಕೊರೋನಾ ಉರಿಯುವ ಜ್ವಾಲೆಯಾದುದರಿಂದ ಅದನ್ನು ಪೂರ್ಣ ಮುಚ್ಚುವುದು ಅಸಾಧ್ಯ. ಸಂದಿಯಿಂದ ಪ್ರಕರವಾಗಿ ಅದು ಹೊರಕ್ಕೆ ಪ್ರಕಾಶವನ್ನು ಚೆಲ್ಲುತ್ತಿರುತ್ತದೆ. ಆದರೆ ಸಂಜೆಗತ್ತಲು ಆವರಿಸಿಕೊಳ್ಳುವುದು ಮಾಮೂಲು.
ಸೆಯಿಂಟ್ ಹೆಲೆನಾ, ನಮೀಬಿಯಾ, ಲೆಸೆತೋ, ದಕ್ಷಿಣ ಆಫ್ರಿಕಾ, ದಕ್ಷಿಣ ಜಾರ್ಜಿಯಾ, ಸ್ಯಾಂಡ್ ವಿಚ್ ಐಲ್ಯಾಂಡ್ಸ್, ಕ್ರಾಜೆಟ್ ದ್ವೀಪಗಳು, ಫಾಕ್ ಲ್ಯಾಂಡ್ ದ್ವೀಪಗಳು, ಚಿಲಿ, ನ್ಯೂಜೀಲ್ಯಾಂಡ್, ಆಸ್ಟ್ರೇಲಿಯಾಗಳಲ್ಲಿ ಕೆಲವಂಶ ಗ್ರಹಣ ಕಾಣಿಸಿತು ಎಂದು ನಾಸಾ ವರದಿ ಮಾಡಿದೆ.


ಭಾರತದ ಕೆಲವು ಕೇಂದ್ರಗಳಲ್ಲಿ ನಾಸಾದ ನೇರ ಸ್ಟ್ರೀಮಿಂಗ್ ಮೂಲಕ ಈ ಗ್ರಹಣವನ್ನು ವೀಕ್ಷಿಸಲಾಯಿತು. ಬೆಂಗಳೂರಿಗೂ ಆ ಭಾಗ್ಯ ಇತ್ತು.

Join Whatsapp