ತಾಯಿಫ್: ಕತಾರ್ ನಿಂದ ಸೌದಿ ಅರೇಬಿಯಾಕ್ಕೆ ಉಮ್ರಾ ನಿರ್ವಹಿಸಲು ಕಾರಿನಲ್ಲಿ ತೆರಳುತ್ತಿದ್ದ ಹಳೆಯಂಗಡಿಯ ಒಂದೇ ಕುಟುಂಬದ ಮೂವರ ಅಂತಿಮ ಸಂಸ್ಕಾರ ತಾಯಿಫ್ ನಡುವಿನ ಉಮ್ಮುಲ್ ಹಮ್ಮಾಮ್ ನ ಕಿಂಗ್ ಖಾಲಿದ್ ಗ್ರ್ಯಾಂಡ್ ಮಸೀದಿಯ ದಫನ ಭೂಮಿಯಲ್ಲಿ ಶುಕ್ರವಾರ ನೆರವೇರಿತು.
ರಿಯಾದ್-ತಾಯಿಫ್ ಹೆದ್ದಾರಿಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಹಳೆಯಂಗಡಿ ತೋಕೂರು ನಿವಾಸಿ ಹಿಬಾ (29), ಅವರ ಪತಿ ಮುಹಮ್ಮದ್ ರಮೀಝ್(34) ಮತ್ತು ಪುತ್ರಿ ರಾಹ (3ತಿಂಗಳು) ಮೃತಪಟ್ಟಿದ್ದಾರೆ. ಹಿಬಾ ಅವರ ಹಿರಿಯ ಪುತ್ರ 3 ವರ್ಷದ ಹಾರೂಶ್ (3) ಗಂಭೀರವಾಗಿ ಗಾಯಗೊಂಡಿದ್ದಾನೆ ಎಂದು ಕುಟುಂಬ ಮೂಲಗಳು ಮಾಹಿತಿ ನೀಡಿವೆ.