ಭೂ ಹಗರಣ ಪ್ರಕರಣ: ಇಡಿಯಿಂದ ಶಿವಸೇನಾ ಸಂಸದನ ಸುಮಾರು ರೂ. 1,034 ಕೋಟಿ ಮೌಲ್ಯದ ಆಸ್ತಿ ಜಪ್ತಿ

Prasthutha|

ಮುಂಬೈ: ಸುಮಾರು ರೂ. 1,034 ಕೋಟಿ ಮೌಲ್ಯದ  ಪತ್ರ ಚಾಲ್ ಭೂ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಶಿವಸೇನಾ ಸಂಸದ ಸಂಜಯ್ ರಾವತ್ ಅವರಿಗೆ ಸಂಬಂಧಿಸಿದ ಸುಮಾರು ರೂ. 1,034 ಕೋಟಿ ಮೌಲ್ಯದ   ಕೆಲ ಆಸ್ತಿಗಳನ್ನು ಜಾರಿ ನಿರ್ದೇಶನಾಲಯ ಮಂಗಳವಾರ ಜಪ್ತಿ ಮಾಡಿದೆ.

- Advertisement -

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಂಜಯ್ ರಾವತ್,  ಆಸ್ತಿ ಜಪ್ತಿ ಮಾಡಲಿ, ನನನ್ನೂ ಶೂಟ್ ಮಾಡಲಿ ಅಥವಾ ಜೈಲಿಗೆ ಹಾಕಲಿ ನಾನು ಯಾರಿಗೂ  ಹೆದರುವವನಲ್ಲ, ಸಂಜಯ್ ರಾವತ್ ಬಾಳ ಸಾಹೇಬ್ ಠಾಕ್ರೆ ಅನುಯಾಯಿ, ಶಿವ ಸೈನಿಕ.  ಹೋರಾಡಿ ಎಲ್ಲವನ್ನೂ ಹೊರಗೆ ತರುತ್ತೇನೆ. ನಾನು ಸುಮ್ಮನಿರುವುದಿಲ್ಲ. ಸತ್ಯಾಂಶ ಹೊರಗೆ ಬರಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಹಾರಾಷ್ಟ್ರದ ಅಲಿಬಾಗ್ ನಲ್ಲಿರುವ ರೂ. 9 ಕೋಟಿ ಮೌಲ್ಯದ ಭೂಮಿ ಮತ್ತು ದಾದರ್ ಉಪನಗರದಲ್ಲಿರುವ ರೂ. 2 ಕೋಟಿ ಮೌಲ್ಯದ ಫ್ಲ್ಯಾಟ್ ಜಪ್ತಿಯಾಗಿವೆ ಎಂದು ಏಜೆನ್ಸಿ ಮೂಲಗಳು ತಿಳಿಸಿವೆ.




Join Whatsapp