ಜೆಡಿಯು ರಾಷ್ಟ್ರಾಧ್ಯಕ್ಷ ಸ್ಥಾನಕ್ಕೆ ಲಲನ್ ಸಿಂಗ್ ರಾಜೀನಾಮೆ: ನಿತೀಶ್ ಕುಮಾರ್ ಗೆ ಸಾರಥ್ಯ

Prasthutha|

ನವದೆಹಲಿ: ಜೆಡಿಯುನ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಲಲನ್ ಸಿಂಗ್ ರಾಜೀನಾಮೆ ನೀಡಿದ್ದು, ಪಕ್ಷದ ಜವಾಬ್ದಾರಿಯನ್ನು ನಿತೀಶ್ ಕುಮಾರ್ ಹೊತ್ತುಕೊಳ್ಳಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

- Advertisement -

ಲಲನ್ ಸಿಂಗ್ ರಾಜೀನಾಮೆಗೆ ಕಾರಣವನ್ನು ಇನ್ನೂ ಬಹಿರಂಗಪಡಿಸಿಲ್ಲ. ಈ ಸಭೆಗೆ ದೆಹಲಿ ತಲುಪಿರುವ ಜೆಡಿಯು ನಾಯಕರು ನಿರ್ಧಾರ ಕೈಗೊಳ್ಳುವ ನಮ್ಮ ನಾಯಕರೊಂದಿಗೆ ನಾವಿದ್ದೇವೆ ಎಂದು ಹೇಳಿದ್ದಾರೆ.

ಬಿಹಾರ ಮಾತ್ರವಲ್ಲದೇ ದೇಶವೇ ನಿತೀಶ್ ಕುಮಾರ್ ಮೇಲೆ ಕಣ್ಣಿಟ್ಟಿದೆ. ನಿತೀಶ್ ಕುಮಾರ್ ಮತ್ತು ಲಲನ್ ಸಿಂಗ್ ನಡುವೆ ಯಾವುದೇ ವ್ಯತ್ಯಾಸವಿಲ್ಲ ಎಂದು ಪಕ್ಷದ ಕಾರ್ಯಕರ್ತರು ಹೇಳಿದ್ದಾರೆ

Join Whatsapp