ಕರವೇ ಕಾರ್ಯಕರ್ತರ ಬಂಧನ: ಸರ್ಕಾರದ ಧೋರಣೆಯನ್ನು ನಾವು ಖಂಡಿಸುತ್ತೇವೆ; ಸಾಹಿತಿ ದೊಡ್ಡರಂಗೇಗೌಡ

Prasthutha|

ಬೆಂಗಳೂರು: ನಾಮಫಲಕಗಳಲ್ಲಿ ಕನ್ನಡ ಕಡ್ಡಾಯ ಬಳಕೆಗೆ ಆಗ್ರಹಿಸಿ ರಾಜಧಾನಿಯಲ್ಲಿ ಪ್ರತಿಭಟನೆ ಮಾಡಿ ಮಾಲ್ ಮತ್ತು ಹೋಟೆಲ್ ಗಳ ಮೇಲೆ ಕಲ್ಲುತೂರಾಟ ನಡೆಸಿದ ಸಂಬಂಧ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣಗೌಡ ಸೇರಿದಂತೆ 29 ಜನ ಕರವೇ ಕಾರ್ಯಕರ್ತರನ್ನು ಬಂಧಿಸಲಾಗಿದೆ. ಸರ್ಕಾರದ ಈ ಕ್ರಮದ ವಿರುದ್ಧ ಹಿರಿಯ ಸಾಹಿತಿ ಡಾ. ದೊಡ್ಡರಂಗೇಗೌಡ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

ಇಂಥಹ ಪರಿಸ್ಥಿತಿ ತಮಿಳುನಾಡು, ಆಂಧ್ರಪ್ರದೇಶಕ್ಕೆ ಬಂದಿದ್ದರೇ ಅದರ ಕಥೆ ಬೇರೆಯಾಗುತ್ತಿತ್ತು. ಮುಖ್ಯಮಂತ್ರಿಗಳು ಈ ರೀತಿ ಮಾಡಿರುವುದು ಸರಿ ಅಲ್ಲ. ಅಧಿಕಾರದ ಖುರ್ಚಿ ಸಿಕ್ಕಿದೆ ಅಂಥ ಈ ರೀತಿ ಮಾಡಿದ್ದಾರೆ. ನಾವು ಇನ್ಮುಂದೆ ಸಹಿಸುವುದಿಲ್ಲ ನಮಗೂ ಸ್ವಾಭಿಮಾನ ಇದೆ ಎಂದು ಹೇಳಿದ್ದಾರೆ.

ಕನ್ನಡದ ಎಲ್ಲಾ ಶಕ್ತಿಗಳು ಇದನ್ನು ಖಂಡಿಸಬೇಕಾಗಿದೆ. ಸ್ಫೋಟವಾಗುವ ಕಾಲ ಸಮೀಪವಿದೆ. ನಾವು ಸುಮ್ಮ ಸುಮ್ಮನೆ ಕಾಲು ಕೆರೆದುಕೊಂಡು ಜಗಳಕ್ಕೆ ಬರುವುದಿಲ್ಲ. ಈ ರೀತಿ ನಮ್ಮನ್ನು ಶೋಷಣೆ ಮಾಡಿ ಹಿಂಸೆ ಕೊಟ್ಟರೇ ನಾವು ಏನು ಮಾಡುವುದು. ಅನ್ಯಾಯ ಆಗುತ್ತಿರುವಾಗ ಮಾತ್ರ ನಾವು ಪ್ರತಿಭಟನೆ ಮಾಡುತ್ತೇವೆ. ಸರ್ಕಾರದ ಧೋರಣೆಯನ್ನ ನಾವು ಖಂಡಿಸುತ್ತೇವೆ ಎಂದರು.

Join Whatsapp