ಯಾವುದೇ ಮುನ್ಸೂಚನೆ ನೀಡದೆ ನಟಿ ಆಯಿಷಾ ಸುಲ್ತಾನರನ್ನು ಮತ್ತೊಮ್ಮೆ ವಿಚಾರಣೆಗೊಳಪಡಿಸಿದ ಲಕ್ಷದ್ವೀಪ ಪೊಲೀಸರು

Prasthutha|

ಕೊಚ್ಚಿ: ದೇಶದ್ರೋಹ ಪ್ರಕರಣದಲ್ಲಿ ನಟಿ ಆಯಿಷಾ ಸುಲ್ತಾನ ಅವರನ್ನು ಮತ್ತೆ ವಿಚಾರಣೆಗೊಳಪಡಿಸಲಾಗಿದೆ. ಲಕ್ಷದ್ವೀಪ ಕವರತ್ತಿ ಪೊಲೀಸರ ತಂಡ ಕೊಚ್ಚಿಯ ಕಾಕನಾಡ್‌ ಫ್ಲ್ಯಾಟ್‌ ಗೆ ಆಗಮಿಸಿದ್ದು, ಯಾವುದೇ ಮುನ್ಸೂಚನೆ ಅಥವಾ ನೋಟೀಸ್ ನೀಡದೆ ಆಗಮಿಸಿ ಪೊಲೀಸರ ತಂಡವು ನಟಿಯನ್ನು ವಿಚಾರಣೆಗೊಳಪಡಿಸಿದೆ.

- Advertisement -

ಲಕ್ಷದ್ವೀಪದಲ್ಲಿ ಕೋವಿಡ್ ಹರಡಲು ಕೇಂದ್ರ ಸರ್ಕಾರದ ಜೈವಿಕ ಅಸ್ತ್ರವೇ ಕಾರಣ ಎಂದು ಆಯಿಷಾ ಚಾನೆಲ್ ಚರ್ಚೆಯಲ್ಲಿ ಹೇಳಿದ್ದರೆಂದು ಅವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಲಾಗಿತ್ತು. ‘ಜೈವಿಕ ಅಸ್ತ್ರ’ ಎಂಬ ಹೇಳಿಕೆ ನೀಡಿದ ಆಯಿಷಾ ಸುಲ್ತಾನಾ ವಿರುದ್ಧದ ದೇಶದ್ರೋಹ ಪ್ರಕರಣವನ್ನು ಆರಂಭಿಕ ಹಂತದಲ್ಲಿ ವಜಾಗೊಳಿಸಲು ಸಾಧ್ಯವಿಲ್ಲ ಎಂದು ಈ ಹಿಂದೆ ಕೇರಳ ಹೈಕೋರ್ಟ್ ತೀರ್ಪು ನೀಡಿತ್ತು.



Join Whatsapp