ಲಕ್ಷದ್ವೀಪದ ನಟಿ ಆಯಿಷಾ ಸುಲ್ತಾನ ಅವರ ಮೂಲ ಊರು ಮಂಗಳೂರಿನ ಕೃಷ್ಣಾಪುರ !

Prasthutha|

►‘ನನ್ನ ವಿರುದ್ಧ ದೊಡ್ಡ ತಂಡವೊಂದು ಷಡ್ಯಂತ್ರ ನಡೆಸುತ್ತಿದೆ’

- Advertisement -

ಲಕ್ಷದ್ವೀಪದ ಆಡಳಿತಾಧಿಕಾರಿ ಹಾಗೂ ಅಲ್ಲಿ ಕೋವಿಡ್ ನಿರ್ವಹಣೆ ಮಾಡುವಲ್ಲಿನ ವೈಫಲ್ಯದ ಬಗ್ಗೆ ಹೇಳಿಕೆ ನೀಡಿದ ಕಾರಣಕ್ಕಾಗಿ ದೇಶದ್ರೋಹ ಪ್ರಕರಣ ಎದುರಿಸುತ್ತಿರುವ ಲಕ್ಷದ್ವೀಪದ ಚಿತ್ರ ನಿರ್ಮಾಪಕಿ ಹಾಗೂ ನಟಿ ಆಯಿಷಾ ಸುಲ್ತಾನ, ತನ್ನನ್ನು ಬಾಂಗ್ಲಾದೇಶದ ಮೂಲದವರು ಎಂಬ ಅಪಪ್ರಚಾರದ ಬಗ್ಗೆ ಖಡಕ್ಕಾಗಿ ತಿರುಗೇಟು ನೀಡಿದ್ದಾರೆ. ನನ್ನ ಅಜ್ಜ ಲಕ್ಷದ್ವೀಪದ ಮೂಲದವರು ಮತ್ತು ಅಜ್ಜಿಯ ಮೂಲ ಊರು ಮಂಗಳೂರು ಸಮೀಪದ ಕೃಷ್ಣಾಪುರ ಎಂದು ಸ್ಪಷ್ಟಪಡಿಸಿದ್ದಾರೆ. ತನ್ನ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಬೆಂಬಲಿಗರು ನಾನು ಬಾಂಗ್ಲಾದೇಶಿ ಮತ್ತು ಪಾಕಿಸ್ತಾನದಲ್ಲಿ ಶಿಕ್ಷಣ ಪಡೆದಿದ್ದೇನೆ ಎಂಬೆಲ್ಲಾ ಅಪಪ್ರಚಾರದ ಬಗ್ಗೆ ಪ್ರತಿಕ್ರಿಯೆ ನೀಡುತ್ತಾ ತನ್ನ ತಂದೆ, ತಾಯಿ ಮತ್ತು ತನ್ನ ಜನನ ಮೂಲದ ಬಗ್ಗೆ ಮಾಹಿತಿ ನೀಡಿದ್ದಾರೆ.

“ನಾನು ಬಿಜೆಪಿ ವಿರುದ್ಧ ಮಾತನಾಡಿದ್ದೇನೆ ಎಂಬ ಕಾರಣಕ್ಕಾಗಿ ನನ್ನನ್ನು ತೇಜೋವಧೆ ಮಾಡಲಾಗುತ್ತಿದೆ. ನಾನು ಬಾಂಗ್ಲಾದೇಶದವಳು ಎಂದು ಅಪಪ್ರಚಾರ ನಡೆಸುತ್ತಿದ್ದಾರೆ. ಅವರೆಲ್ಲರ ವಿರುದ್ಧ ನಾನು ಕಾನೂನು ಕ್ರಮ ತೆಗೆದುಕೊಳ್ಳುತ್ತೇನೆ” ಎಂದು ನಟಿ ಆಯಿಶಾ ಮಾಧ್ಯಮವೊಂದಕ್ಕೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

- Advertisement -

“ನಾನು ಜನಿಸಿರುವುದು ಲಕ್ಷದ್ವೀಪದ ಚೇತ್ಲಾತ್ ಎಂಬ ದ್ವೀಪದಲ್ಲಾಗಿದೆ. ಅಮಿನಾ ಮಂಝಿಲ್ ಎಂಬುವುದು ನಮ್ಮ ಮನೆತನದ ಮೂಲ ಹೆಸರಾಗಿದೆ. ನನ್ನ ಅಜ್ಜಿ ಕರ್ನಾಟಕದ ಮಂಗಳೂರಿನ ಕೃಷ್ಣಾಪುರದ ಮೂಲದವರಾಗಿದ್ದಾರೆ. ಅಜ್ಜ ಮುಹಮ್ಮದ್, ತಂದೆ ಕುಂಞಿ ಕೋಯಾ ಹಾಗೂ ತಾಯ್ ಹವ್ವಾ ಇವರೆಲ್ಲರ ಮೂಲ ಕೂಡ ಚೆತ್ಲಾತ್ ದ್ವೀಪ ವಾಗಿದೆ. ನನ್ನ ವಿರುದ್ಧ ಬಹುದೊಡ್ಡ ತಂಡವೊಂದು ವ್ಯವಸ್ಥಿತವಾಗಿ ಅಪಪ್ರಚಾರ ನಡೆಸುತ್ತಿದೆ. ನನ್ನನ್ನು ಹೇಗಾದರೂ ಮಾಡಿ ಸುಮ್ಮನಾಗಿಸಬೇಕೆನ್ನುವುದು ಅವರ ಉದ್ದೇಶವಾಗಿದೆ” ಎಂದು ನಟಿ ಆಯಿಶಾ ಸುಲ್ತಾನ ಹೇಳಿದ್ದಾರೆ.



Join Whatsapp