ನತಾಶಾ, ಕಲಿತಾ, ತನ್ಹಾರನ್ನು ತಕ್ಷಣ ಬಿಡುಗಡೆ ಮಾಡಿ: ದೆಹಲಿ ನ್ಯಾಯಾಲಯ ಆದೇಶ

Prasthutha|

ನವದೆಹಲಿ: ವಿದ್ಯಾರ್ಥಿ ನಾಯಕರಾದ ನತಾಶಾ ನರ್ವಾಲ್, ದೇವಾಂಗನಾ ಕಲಿತಾ ಮತ್ತು ಆಸಿಫ್ ಇಕ್ಬಾಲ್ ತನ್ಹಾ ಅವರನ್ನು ತಕ್ಷಣ ಬಿಡುಗಡೆ ಮಾಡಲು ದೆಹಲಿ ನ್ಯಾಯಾಲಯ ಗುರುವಾರ ಆದೇಶಿಸಿದೆ.
ಪೌರತ್ವ ತಿದ್ದುಪಡಿ ವಿರೋಧದ ಪ್ರತಿಭಟನೆಯ ವೇಳೆ ಉಂಟಾಗಿದ್ದ ಗಲಭೆಗೆ ಕುಮ್ಮಕ್ಕು ನೀಡಿದ ಆರೋಪದ ಮೇಲೆ ಮೂವರೂ ಕಳೆದ ಮೇನಲ್ಲಿ ಬಂಧಿಸಲ್ಪಟ್ಟರು. ಈ ಮೂವರಿಗೂ ಹೈಕೋರ್ಟ್ ಮಂಗಳವಾರ ಜಾಮೀನು ನೀಡಿದ್ದರೂ ಜೈಲಿನಲ್ಲಿದ್ದರೂ ಪೊಲೀಸರು ಅವರನ್ನು ಬಿಡುಗಡೆ ಮಾಡಲ ವಿಳಂಬ ಮಾಡಿದ್ದರು.

- Advertisement -


ವಿಳಾಸಗಳು ಮತ್ತು ಜಾಮೀನುಗಳ ಪರಿಶೀಲನೆ ಪ್ರಕ್ರಿಯೆ ಪೂರ್ಣಗೊಳಿಸಲು ಇನ್ನೂ ಮೂರು ದಿನಗಳನ್ನು ಕೋರಿ ದೆಹಲಿ ಪೊಲೀಸರು ನಿನ್ನೆ ಸಲ್ಲಿಸಿದ್ದ ಅರ್ಜಿಯನ್ನು ಗುರವಾರ ವಜಾಗೊಳಿಸಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ರವೀಂದರ್ ಬೇಡಿ, ಹೈಕೋರ್ಟ್ ಈಗಾಗಲೇ ಜಾಮೀನು ಆದೇಶವನ್ನು ನೀಡಿದ್ದು, ಬಿಡುಗಡೆ ವಾರಂಟ್‌ಗಳನ್ನು ತಿಹಾರ್ ಜೈಲಿಗೆ ಕಳುಹಿಸಲಾಗಿದೆ ಎಂದು ಹೇಳಿದರು.


ಸಂಜೆ 5 ಗಂಟೆ ವೇಳೆಗೆ ಮೂವರೂ ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆ ಇದೆ.
ಹೈಕೋರ್ಟ್ ಜಾಮೀನು ನೀಡಿದ್ದರೂ ನಮ್ಮ ಬಿಡುಗಡೆಯನ್ನು ಉದ್ದೇಶಪೂರ್ವಕವಾಗಿ ವಿಳಂಬ ಮಾಡಲಾಗುತ್ತಿದೆ ಎಂದು ಮೂವರು ಹೈಕೋರ್ಟ್ ಗೆ ಮತ್ತೆ ಕದ ತಟ್ಟಿದ್ದರು.

Join Whatsapp