ಲಕ್ನೋ: ಲಖಿಂಪುರ ಖೇರಿಯ ಹೇಯ ಕೃತ್ಯದ ಆರೋಪಿಯಾಗಿರುವುದರಿಂದ ಕೇಂದ್ರದ ಗೃಹ ರಾಜ್ಯ ಸಚಿವ ಅಜಯ್ ಮಿಶ್ರಾ ಮಗ ಆಶಿಶ್ ಮಿಶ್ರಾಗೆ ಜಾಮೀನು ನೀಡಿಕೆಯನ್ನು ಉತ್ತರ ಪ್ರದೇಶ ಸರಕಾರ ವಿರೋಧಿಸಿ ಸುಪ್ರೀಂ ಕೋರ್ಟಿನಲ್ಲಿ ಹೇಳಿಕೆ ನೀಡಿದೆ.
“ಇದು ಅತ್ಯಂತ ಹೇಯ ಕೃತ್ಯವಾದುದರಿಂದ ಜಾಮೀನು ನೀಡಿಕೆಯಿಂದ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುತ್ತದೆ” ಎಂದು ಉತ್ತರ ಪ್ರದೇಶದ ಹೆಚ್ಚುವರಿ ಅಡ್ವಕೇಟ್ ಜನರಲ್ ಗರಿಮಾ ಪ್ರಸಾದ್, ಸುಪ್ರೀಂ ಕೋರ್ಟಿನ ಜಸ್ಟಿಸ್ ಗಳಾದ ಸೂರ್ಯಕಾಂತ್ ಮತ್ತು ಜೆ. ಕೆ. ಮಹೇಶ್ವರಿ ಅವರಿದ್ದ ಪೀಠಕ್ಕೆ ತಿಳಿಸಿದರು.
“ಇದೇನಿದು, ಯಾರು ಶಕ್ತಿಶಾಲಿ? ನಾವು ಪ್ರತಿ ನಿತ್ಯ ಹಾಜರಾಗುತ್ತಿದ್ದೇವೆ. ಇದು ಜಾಮೀನು ನೀಡದಿರುವುದಕ್ಕೆ ಇರುವ ಸ್ಥಿತಿಯೇ?” ಮಿಶ್ರಾ ಪರ ಹಾಜರಾದ ಹಿರಿಯ ವಕೀಲ ಮುಕುಲ್ ರೋಹಟಗಿಯವರು ವಿರೋಧಿಸಿ ಹೇಳಿದರು.
ನನ್ನ ಕಕ್ಷಿದಾರರು ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ಕಸ್ಟಡಿಯಲ್ಲಿ ಇದ್ದಾರೆ. ಇದರ ವಿಚಾರಣೆಯೇ ಏಳೆಂಟು ವರ್ಷ ಎಳೆಯಬಹುದು. ದೂರು ನೀಡಿರುವ ಜಗಜೀತ್ ಸಿಂಗ್ ನೋಡಿದ ಸಾಕ್ಷಿಯಲ್ಲ, ವಿಷಯ ಕೇಳಿದ ಸಾಕ್ಷಿ ಎಂದೂ ರೋಹಟಗಿ ಹೇಳಿದರು.
“ದೂರುದಾರ ಜಗಜೀತ್ ಸಿಂಗ್ ಕಣ್ಣಾರೆ ಕಂಡ ವ್ಯಕ್ತಿಯಲ್ಲ. ಅಲ್ಲಿ ನೂರಾರು ಜನ ನೋಡಿದವರು ಗುಂಪಿನ ಮೇಲೆ ನಾವು ಎರಗಿರುವುದಾಗಿ ಹೇಳುತ್ತಾರೆ, ಹಾಗಿರುವಾಗ ಕಣ್ಣಾರೆ ಕಾಣದ ವ್ಯಕ್ತಿಯೊಬ್ಬನ ಸಾಕ್ಷ್ಯದ ಮೇಲೆ ಏಕೆ ಎಫ್’ಐಆರ್ ದಾಖಲಿಸಲಾಗಿದೆ?” ರೋಹಟಗಿ ಕೇಳಿದರು.
“ಮೊದಲ ನಿದರ್ಶನದಲ್ಲಿ ನನ್ನ ಕಕ್ಷಿದಾರರು ಜಾಮೀನು ಪಡೆದಿದ್ದಾರೆ. ಇದು ಕೋಳಿ ಕೋಣದ ಕತೆಯಲ್ಲ, ನಾನು ಹೇಳುವುದರಲ್ಲಿ ಸತ್ಯವಿದೆ. ನನ್ನ ಕಕ್ಷಿದಾರರು ಕ್ರಿಮಿನಲ್ ಅಲ್ಲ, ಅಂತಹ ಹಿಂದಿನ ಯಾವ ದಾಖಲೆಯೂ ಇಲ್ಲ ಎಂದು ರೋಹಟಗಿ ಹೇಳಿದರು.
“ಈ ಘಟನೆಯವರೆಗೆ ಅಂತಹದ್ದು ನಡೆದಿಲ್ಲ ಸರಿ” ಎಂದು ಹೆಚ್ಚುವರಿ ಎಡ್ವೊಕೇಟ್ ಜನರಲ್ ಹೇಳಿದರು. ಜಾಮೀನು ನೀಡಿಕೆ ವಿರೋಧಿಸುವವರ ಪರ ಹಾಜರಾದ ದುಷ್ಯಂತ್ ದವೆಯವರು ಜಾಮೀನು ನೀಡಿಕೆ ಸಮಾಜಕ್ಕೆ ಕೆಟ್ಟ ಸಂದೇಶವಾಗುತ್ತದೆ ಎಂದರು.
“ಇದು ದೊಡ್ಡ ಸಂಚು ಹಾಗೂ ತುಂಬ ಮುಂದಾಲೋಚನೆಯಿಂದ ಮಾಡಿದ ಕೊಲೆ. ನಾನು ಚಾರ್ಜ್ ಶೀಟಿನಲ್ಲಿ ಆಪಾದಿಸಿರುವುದರ ಮೇಲೆಯೇ ಇದನ್ನು ಹೇಳುತ್ತಿದ್ದೇನೆ. ಅಲ್ಲದೆ ಅವರು ಕೇಂದ್ರದ ಶಕ್ತಿಶಾಲಿ ಮಂತ್ರಿಯೊಬ್ಬರ ಮಗ ಹಾಗೂ ಬಲಶಾಲಿ ವಕೀಲರನ್ನು ಹೊಂದಿದ್ದಾರೆ” ಎಂದು ದವೆ ಹೇಳಿದರು.
ಅತ್ಯಂತ ಹೇಯ ಅಪರಾಧ ಎನ್ನುವಾಗ ಅದರಲ್ಲಿ ಎರಡು ಆವೃತ್ತಿಗಳಿರುತ್ತವೆ. ಹಾಗಿರುವಾಗ ಒಂದೇ ಆವೃತ್ತಿಯ ಮೇಲೆ ಅಭಿಪ್ರಾಯ ಪಡಲಾಗದು ಎಂದು ಸರ್ವೋಚ್ಚ ನ್ಯಾಯಾಲಯವು ಹೇಳಿತು.
“ನಾವು ಅಮೂಲಾಗ್ರವಾಗಿ ಗಮನಿಸಿದ್ದೇವೆ. ಆತ ಆ ಅಪರಾಧದಲ್ಲಿ ಒಳಗೊಂಡಿದ್ದ; ಆತ ಮುಗ್ಧನೇನೂ ಅಲ್ಲ. ಇಲ್ಲಿರುವ ಮುಖ್ಯ ವಿಷಯ ಆತನು ಸಾಕ್ಷ್ಯ ನಾಶಕ್ಕೆ ಪ್ರಯತ್ನಿಸಿದನೇ ಎನ್ನುವುದಾಗಿದೆ.” ಪೀಠ ಹೇಳಿತು.