ಮಂಗಳೂರು: ಪಾಲಿಕೆಯ ಜಲಸಿರಿ ಯೋಜನೆ ಕಾಮಗಾರಿ ವೇಳೆ ದುರಂತ | ಮಣ್ಣಿನಡಿ ಸಿಲುಕಿದ ಮಹಿಳೆ, ಮಗುವಿನ ರಕ್ಷಣೆ
Prasthutha: December 11, 2021

ಮಂಗಳೂರು: ತಡೆಗೋಡೆ ಕುಸಿದ ಪರಿಣಾಮ ಮಹಿಳೆ ಹಾಗೂ ಮಗು ಮಣ್ಣಿನಡಿ ಸಿಲುಕಿದ ಘಟನೆ ನಗರದ ಹೊರವಲಯದ ಬೊಂದೇಲ್ ಬಳಿಯ ಕೃಷ್ಣ ನಗರದಲ್ಲಿ ನಡೆದಿದೆ. ಮಗು ಪ್ರಾಣಾಪಾಯದಿಂದ ಪಾರಾದರೆ, ಗಂಭೀರ ಸ್ಥಿತಿಯಲ್ಲಿದ್ದ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾಗಿ ತಿಳಿದು ಬಂದಿದೆ.
ಮಹಾನಗರ ಪಾಲಿಕೆಯ ಜಲ ಸಿರಿ ಯೋಜನೆ ಕಾಮಗಾರಿ ವೇಳೆ ಈ ಘಟನೆ ನಡೆದಿದ್ದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ತಕ್ಷಣವೇ ಮಗುವನ್ನು ಸ್ಥಳೀಯರು ರಕ್ಷಿಸಿದರೆ, ಮಹಿಳೆಯನ್ನು ಜೆಸಿಬಿ ಸಹಾಯದಿಂದ ಮೇಲಕ್ಕೆತ್ತಲಾಗಿದೆ.
