ನಕಲಿ ಸಿಮ್​ ತಡೆಗೆ ಕೆವೈಸಿ ಬದಲಾವಣೆ

Prasthutha|

ಬೆಂಗಳೂರು: ನಕಲಿ ಸಿಮ್​ ಕಾರ್ಡ್​ ಬಳಕೆದಾರರಿಗೆ ಬಿಸಿ ಮುಟ್ಟಿಸಲು ದೂರ ಸಂಪರ್ಕ ಕೆವೈಸಿ ಪ್ರಕ್ರಿಯೆಯಲ್ಲಿ ಬದಲಾವಣೆ ಮಾಡಲು ಮುಂದಾಗಿದೆ.

- Advertisement -


ಹೊಸ ಮಾನದಂಡಗಳ ಪ್ರಕಾರ ಒಂದೇ ಐಡಿಯಲ್ಲಿ ಖರೀದಿಸುವ ಸಿಮ್​ ಕಾರ್ಡ್​ ಸಂಖ್ಯೆಯನ್ನ ಒಂಬತ್ತರಿಂದ ಐದಕ್ಕೆ ಮತ್ತು ಕೆವೈಸಿ ಪ್ರಕ್ರಿಯೆಯನ್ನು ಸಂಪೂರ್ಣ ಡಿಜಿಟಲೀಕರಣ ಮಾಡಲು ಚಿಂತಿಸಿದೆ.


ಸ್ವಯಂ ಕೆವೈಸಿ ಪ್ರಕ್ರಿಯೆ
ಗ್ರಾಹಕರು ಆ್ಯಪ್​/ವೆಬ್​ಸೈಟ್​​/ ಪೋರ್ಟಲ್​ ಸೇವೆಯ ಮೂಲಕ ಮೊಬೈಲ್​ ನಂಬರ್​ ನೊಂದಣಿ​ ಮಾಡಬೇಕು. ರಿಜಿಸ್ಟರ್​ ಮಾಡುವ ಮೊಬೈಲ್​ ನಂಬರ್​​ ಕುಟುಂಬದ ಸದಸ್ಯರು/ ಸಂಬಂಧಿಕರಿಗೆ ತಿಳಿದಿರಬೇಕು. ಗ್ರಾಹಕರು ಆ ನಂಬರ್​ಗೆ ಓಟಿಪಿ ಪಡೆಯುವಂತಿರಬೇಕು.

- Advertisement -


ಪಿಒಐ/ಪಿಒಎ ಡ್ಯಾಕುಮೆಂಟ್​ ಮೂಲಕ ಎಲೆಕ್ಟ್ರಾನಿಕಲ್​​ ಧೃಡೀಕರಣ ಪಡೆಯಬಹುದು ಅಥವಾ ಡೆಮೋಗ್ರಾಫಿ ಮಾಹಿತಿಯೊಂದಿಗೆ ಡಿಜಿಲಾಕರ್​/ಯುಐಡಿಎಐ ಸಬ್​ಸ್ಕ್ರೈಬ್​ ವೇರಿಫಿಕೇಶನ್​ ಮಾಡಬಹುದು.
ಆಧಾರ್​ ಮೂಲಕವು ಚಂದಾದಾರಿಕೆ ಪಡೆದು ವೇರಿಫಿಕೇಶನ್​ ಮಾಡಿಸಬಹುದು.


ಯುಐಡಿಎಐ ಡಿಜಿಲಾಕರ್​ ಮೂಲಕ ಅಟೋಮ್ಯಾಟಿಕ್​​ ಗ್ರಾಹಕ ಅಪ್ಲಿಕೇಷನ್ ಫಾರ್ಮ್​ ಸಿಗುತ್ತದೆ. ಇದರೊಂದಿಗೆ ಗ್ರಾಹಕ ಫೋಟೋಗ್ರಾಫ್​ ಮತ್ತು ವಿಡಿಯೋ ಕೂಡ ಸೆರೆ ಹಿಡಿಯಬಹುದಾಗಿದೆ.

Join Whatsapp