ಕುಂದಾಪುರ: ಸಾಮೂಹಿಕ ವಿವಾಹದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಆರು ಜೋಡಿ

Prasthutha|

ಕುಂದಾಪುರ: ಸೌದಿ ಅರೇಬಿಯಾದ ಉದ್ಯಮಿ ಅಲ್ ಮಿರ್ಝಾ ಗ್ರೂಪ್ ಆಸಿಫ್ ಪಾರಂಪಳ್ಳಿ ಹಾಗೂ ಪ್ರೆಸಿಡೆಂಟ್ ಗ್ರೂಪ್’ನ ಅಬ್ದುಲ್ ಸತ್ತಾರ್ ಕೋಟೇಶ್ವರ ಇವರ ಸಾರಥ್ಯದಲ್ಲಿ ಹಾಗೂ ಮುಹುಯುದ್ದಿನ್ ಜುಮ್ಮಾ ಮಸೀದಿ ಕೋಡಿ ಕನ್ಯಾನ ಇವರ ಸಹಕಾರದೊಂದಿಗೆ ಆರು ಜೋಡಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮ ತೆಕ್ಕತೆ ಪ್ರೆಸಿಡೆಂಟ್ ಕನ್ವೆನ್ಷನ್ ಸೆಂಟರ್’ನಲ್ಲಿ ನಡೆಯಿತು. ಅಧ್ಯಕ್ಷತೆಯನ್ನು ಕೋಡಿ ಕನ್ಯಾನ ಮುಹುಯುದ್ದಿನ್ ಜುಮ್ಮಾ ಮಸೀದಿ ಅಧ್ಯಕ್ಷ ಹಾಜಿ ಇಸ್ಮಾಯಿಲ್ ಬ್ಯಾರಿ ವಹಿಸಿದ್ದರು.
ಅಸ್ಸಯ್ಯದ್ ಕೆ. ಎಸ್. ಆಟಕೋಯ ತಂಙಲ್ ಕುಂಬೋಳ್ ದುವಾ ನೆರವೇರಿಸಿದರು. ಉಡುಪಿ ಜಿಲ್ಲಾ ಖಾಝಿ ಜೈನುಲ್ ಉಲೇಮಾ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ನಿಖಾಹ್ ನೆರವೇರಿಸಿ, ಜಾಫರ್ ಅಸಕಾಫ್ ತಂಙಳ್ ಕೋಟೇಶ್ವರ, ಮುಹುಯುದ್ದಿನ್ ಜುಮ್ಮಾ ಮಸೀದಿ ಕೋಡಿ ಕನ್ಯಾನ ಖತೀಬ್ ಅಬೂಬಕರ್ ಸಿದ್ದೀಕ್ ವಿಶೇಷ ಅತಿಥಿಯಾಗಿ ಉಪಸ್ಥಿರಿದ್ದರು.
ನಂಡೆ ಪೆಂಙಲ್ ಮಂಗಳೂರಿನ ಮುಖ್ಯಸ್ಥರಾದ ರಫೀಕ್ ಮಾಸ್ಟರ್ ಉದ್ಘಾಟನಾ ಭಾಷಣಗೈದರು. ಮುಖ್ಯ ಅತಿಥಿಗಳಾಗಿ. ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಮೌಲಾನ ಶಾಫಿ ಸಅದಿ, ನಿವೃತ್ತ ನ್ಯಾಯಮೂರ್ತಿ, ಮಾಜಿ ಲೋಕಾಯುಕ್ತ ಎನ್ ಸಂತೋಷ್ ಹೆಗ್ಡೆ, ಅಲ್ ಮುಝೈನ್ ಸೌದಿ ಅರೇಬಿಯಾದ ಉದ್ಯಮಿ ಝಾಕ್ರಿಯಾ ಜೋಕಟ್ಟೆ, ಬಿ.ಎಂ.ಶರೀಫ್, ನಂಡೆ ಪೆಂಙಲ್ ಅಭಿಯಾನದ ಅಧ್ಯಕ್ಷ ಮುಮ್ತಾಜ್ ಅಲಿ ಕೃಷ್ಣಾಪುರ, ಯೂನುಸ್, ಸ್ಯಾಂಡ್’ಟೆಕ್ ಅರೇಬಿಯಾ ಅಲ್ ಜುಬೈಲ್’ನ ಸಿಇಒ ಅಬ್ದುಲ್ ಅಝೀಝ್, ಫಹಾದ್ ಅಲ್ ತಮೀಮಿಯ ಸಿಇಒ ರಿಯಾಝ್, ಶಕ್ತಿ ಸ್ಟೋನ್, ಸಾಸ್ತಾನ, ಹಾಜಿ ಕೆ ಅಬೂಬಕ್ಕರ್ ಪರ್ಕಳ ಮತ್ತಿತರರು ಪಾಲ್ಗೊಂಡಿದ್ದರು.
ರಫೀಕ್ ಮಾಸ್ಟರ್, ಆಸಿಫ್ ಪಾರಂಪಳ್ಳಿ, ಅಬ್ದುಲ್ ಸತ್ತಾರ್ ಕೋಟೇಶ್ವರ ಇವರನ್ನು ಸನ್ಮಾನಿಸಲಾಯಿತು. ಸಾಮೂಹಿಕ ವಿವಾಹ ಸಮಿತಿಯು ಸಂಚಾಲಕ ಇಬ್ರಾಹಿಂ ಪಾರಂಪಳ್ಳಿ, ಕೆ ಹುಸೇನ್ ಕೋಟ ,ಸಹ ಸಂಚಾಲಕ ಅಬ್ಬಾಸ ಅಲಿ ಕೋಡಿ ಕನ್ಯಾನ ,ಜುಮ್ಮಾ ಮಸೀದಿ ಕೊಡಿ ಕನ್ಯಾನ ಪ್ರದಾನ ಕಾರ್ಯದರ್ಶಿ ಅಬ್ದುಲ್ ಲತೀಫ್ ಉಪಸ್ಥಿತರಿದ್ದರು. ಡಿಕ್ಸನ್ ಕಾರ್ಯಕ್ರಮ ನಿರೂಪಿಸಿದರು.



Join Whatsapp