ಕುಂದಾಪುರ: ಗಂಧದ ಮರ ಕಡಿತ; ಕೇಸು ದಾಖಲು

Prasthutha|

ಕುಂದಾಪುರ: ಬೆಳ್ಳಾಲ ಗ್ರಾಮದ ಕಾರಿಬೈಲು ಎಂಬಲ್ಲಿ ಶ್ರೀಗಂಧದ ಮರ ಕಡಿದ ಖಚಿತ ಮಾಹಿತಿ ಮೇರೆಗೆ ಕುಂದಾಪುರ ಅರಣ್ಯಾಧಿಕಾರಿಗಳು ಕಾರ್ಯಾಚರಣೆ ನಡೆಸಿ ಕೇಸು ದಾಖಲಿಸಿ ಗಂಧದ ಮರದ ತುಂಡುಗಳನ್ನು ವಶಕ್ಕೆ ಪಡೆದಿದ್ದಾರೆ. ಸೊತ್ತುಗಳ ಒಟ್ಟು ಮೌಲ್ಯ ಸುಮಾರು 2 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

- Advertisement -

ಬೆಳ್ಳಾಲ ಗ್ರಾಮದ ಕಾರಿಬೈಲು ಎಂಬಲ್ಲಿ ಮನೆಯೊಂದರ ಸಮೀಪ (ಸರಕಾರಿ ಜಾಗವೋ ಖಾಸಗಿಯೋ ಎಂದು ಜಾಗದ ಒಡೆತನ ಕುರಿತು ಗೊಂದಲ ಇದೆ) ಒಂದು ಶ್ರೀಗಂಧದ ಮರ ಕಡಿದುದನ್ನು ಪತ್ತೆ ಹಚ್ಚಿದ ಅರಣ್ಯ ಇಲಾಖೆ ಆರೋಪಿಗಳು ಸ್ಥಳೀಯರಾಗಿದ್ದು, ಅವರ ಸುಳಿವು ದೊರಕಿದ್ದು, ಶೀಘ್ರದಲ್ಲಿಯೇ ಅವರನ್ನು ಬಂಧಿಸಲಾಗುವುದು ಎಂದು ತಿಳಿಸಿದೆ.

ಖಾಸಗಿ ಜಾಗದಲ್ಲಿ ಬೆಳೆಸಿದ ಗಂಧದ ಮರಗಳು ಕೂಡಾ ಕಳೆದ ವರ್ಷದವರೆಗೆ ಸರಕಾರದ ಸೊತ್ತಾಗಿತ್ತು. ಕಳೆದ ವರ್ಷದಿಂದ ಇದನ್ನು ಸರಕಾರಿ ಇಲಾಖೆ ಸುಪರ್ದಿಯಲ್ಲಿ ಕಡಿಯಲು ಅನುಮತಿ ನೀಡಲಾಗುತ್ತಿದೆ. ಅದರಲ್ಲೂ ಶೇ. 10 ಸರಕಾರಕ್ಕೆ ನೀಡಬೇಕು ಎಂಬ ನಿಯಮ ಇದೆ.

- Advertisement -

ಡಿಎಫ್‌ಒ ಉದಯ ನಾಯಕ್‌ ನಿರ್ದೇಶನದಂತೆ, ಎಸಿಎಫ್‌ ಕ್ಲಿಫರ್ಡ್‌ ಲೋಬೋ ಮಾರ್ಗದರ್ಶನದಲ್ಲಿ, ವಲಯ ಅರಣ್ಯಾಧಿ ಕಾರಿ ಕಿರಣ್‌ ಬಾಬು ಟಿ., ಉಪ ವಲಯ ಅರಣ್ಯಾಧಿಕಾರಿ ಆನಂದ ಬಳೆಗಾರ, ಶರತ್‌ ಗಾಣಿಗ, ಗೀತಾ ಯಾಸಣ್ಣನವರ್‌, ಗಸ್ತು ಅರಣ್ಯ ಪಾಲಕ ರಾಘವೇಂದ್ರ, ವಿಜಯ ಕೆ., ಅರಣ್ಯ ವೀಕ್ಷಕ ಉದಯ ಮತ್ತು ವಾಹನ ಚಾಲಕ ಅಶೋಕ ಅವರು ಕಾರ್ಯಾಚರಣೆ ನಡೆಸಿದ್ದರು.



Join Whatsapp